ತಮದಡ್ಡಿ ಶೀಘ್ರ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಗ್ರಾಮಸ್ಥರು ಮನವಿ ಅರ್ಪಿಸಿದರು.
ಹಕ್ಕು ಪತ್ರ ವಿಳಂಬ: ಶೀಘ್ರ ಸ್ಥಳಾಂತರಕ್ಕೆ ಮನವಿ
ರಬಕವಿ-ಬನಹಟ್ಟಿ,ಮೇ23: ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮವು ಕೃಷ್ಣಾ ನದಿಯ ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನಿಂದ ಪ್ರತಿ ವರ್ಷ ಪ್ರವಾಹದಲ್ಲಿ ಮುಳುಗಡೆ ಹೊಂದುತ್ತಿದೆ. ಕಳೆದ 15 ವರ್ಷಗಳಿಂದ ತಮದಡ್ಡಿ ಗ್ರಾಮಕ್ಕೆ ಪುನರ್ವಸರಿ ಕೇಂದ್ರ ನಿರ್ಮಿಸಿ ವಸತಿ ನಿವಶೇನಗಳ ಹಕ್ಕು ಪತ್ರ ವಿತರಿಸಿಲ್ಲ. ಮಳೆಗಾಲದಲ್ಲಿ ನದಿ ಪ್ರವಾಹಕ್ಕೆ ತುತ್ತಾಗುತ್ತಿರುವ ತಮದಡ್ಡಿ ಗ್ರಾಮಸ್ಥರು ನಿತ್ಯ ಕಂಟಕ ಎದುರಿಸುವಲ್ಲಿ ಕಾರಣವಾಗುತ್ತಿದೆ.
ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡರಿಗೆ ಮನವಿ ಅರ್ಪಿಸಲಾಯಿತು. ಪುನರ್ವಸತಿ ಕೇಂದ್ರದಲ್ಲಿ ಸಮರ್ಪಕವಾದ ಮೂಲಭೂತ ಸೌಕರ್ಯಗಳಿಲ್ಲದೆ ಪ್ರತಿ ವರ್ಷ ಎರಡು-ಮೂರು ತಿಂಗಳು ಸಮಸ್ಯೆ ಎದುರಿಸುವ ಮೂಲಕ ವೃದ್ಧರು ಹಾಗು ಮಕ್ಕಳು ತೀವ್ರ ಸಂಕಷ್ಟ ಎದುರಿಸುವಲ್ಲಿ ಕಾರಣವಾಗುತ್ತಿದ್ದರೆ, ಸ್ವಂತ ಮನೆಗಳನ್ನು ಬಿಟ್ಟು ಸ್ಥಳಾಂತರವಾಗುತ್ತಿರುವದರಿಂದ ತೀವ್ರ ತೊಂದರೆಯಾಗುತ್ತಿದೆ. ಇವೆಲ್ಲದರ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ ನಿರ್ಲಕ್ಷ್ಯ ಭಾವನೆಯನ್ನು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ವಿಳಂಬ: ಕಳೆದ 2016 ರಲ್ಲಿಯೇ ತಮದಡ್ಡಿ ಗ್ರಾಮದ ಜನರಿಗೆ ಹಕ್ಕು ಪತ್ರ ನೀಡುವ ಮೂಲಕ ಇಡೀ ಗ್ರಾಮವನ್ನೇ ಸ್ಥಳಾಂತರಿಸುವದಾಗಿ ಸರ್ಕಾರ ಅಧಿಕೃತವಾಗಿ ಮಾಹಿತಿ ಒದಗಿಸಿತ್ತು. ಹಳಂಗಳಿ ಗ್ರಾಮದ ಸರ್ವೆ ನಂ.142 ರಲ್ಲಿನ 89 ಎಕರೆ ಪ್ರದೇಶದ ಜಾಗೆಯನ್ನೂ ಗುರ್ತಿಸಿದೆ. ಅಧಿಕೃತವಾಗಿ ಹಕ್ಕು ಪತ್ರಗಳನ್ನು ನೀಡುವಲ್ಲಿ ಸರ್ಕಾರ ವಿಳಂಬನೀತಿ ಎದುರಿಸುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಎಲ್ಲವನ್ನೂ ಅತಿ ಶೀಘ್ರದಲ್ಲಿ ನಡೆಸುವ ಮೂಲಕ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಇದೇ ಸಂದರ್ಭ ಸುರೇಶ ಅಕ್ಕಿವಾಟ, ನೇಮಣ್ಣ ಜಮಖಂಡಿ, ಬಾಹುಬಲಿ ಶಿರಗಾರ, ಬಸವರಾಜ ಯಾದವಾಡ, ಸುಕುಮಾರ ಪಾಟೀಲ, ಕಲ್ಲಪ್ಪ ಶಿರಹಟ್ಟಿ, ಗಂಗಪ್ಪ ಶಿರಗಾರ, ಜಗದೀಶ ಝಾರಿ, ಮಧು ಕಾಂಬಳೆ, ಈರಪ್ಪ ಹಳೆಮನಿ, ಮಹಾವೀರ ಮಣೆಪ್ಪನವರ, ಸತ್ಯಪ್ಪ ಜುಗಳಿ ಸೇರಿದಂತೆ ಅನೇಕರಿದ್ದರು.

Social Plugin