ತೇರದಾಳ : ಪಟ್ಟಣದ ಐತಿಹಾಸಿಕ ಜೀರಗೇರಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಮೀನುಗಳು ಆಮ್ಲಜನಕದ ಕೊರತೆಯಿಂದ ಸತ್ತು ಕೆರೆಯು ಗಬ್ಬೆoದ್ದು ನಾರುತ್ತಿದೆ. ಅದರಲ್ಲಿಯ ನೀರನ್ನು ಖಾಲಿ ಮಾಡುವಂತೆ ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ, ರೇವಣೇಶ ಹಿರೇಮಠ, ದಲಿತ ಮುಖಂಡ ದಯಾನಂದ ಕಾಳೆ ಆಗ್ರಹಿಸಿದ್ದಾರೆ.
ಕೆರೆಯಲ್ಲಿನ ಮೀನುಗಳು ಸತ್ತು ಕೆರೆಯು ತುಂಬಾ ಹೊಲಸಾಗಿದೆ. ಇದರಿಂದ ಕೆರೆಯು ಗಬ್ಬೆoದ್ದು ನಾರುತ್ತಿದೆ. ಕೆರೆಯ ಸುತ್ತಮುತ್ತಲು ಯಾರು ಸಂಚರಿಸದಂತೆ ಆಗಿದೆ. ಅದರಲ್ಲಿನ ನೀರನ್ನು ಖಾಲಿ ಮಾಡಿ ಹೊಸ ನೀರನ್ನು ಕೆರೆಗೆ ತುಂಬಿಸಬೇಕು. ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳು ಸತ್ತು ಬಿದ್ದಿರುವ ಮೀನುಗಳನ್ನು ಅಲ್ಲಿಯೇ ಭೂಮಿಯನ್ನು ಅಗೆದು ಮುಚ್ಚಿದ್ದರು. ಆದರೆ ಅದರಲ್ಲಿಯ ನೀರನ್ನು ಖಾಲಿ ಮಾಡಿರಲಿಲ್ಲ. ಈಗ ಅದರಲ್ಲಿ ನೀರನ್ನು ಖಾಲಿ ಮಾಡಬೇಕು. ಇದರಿಂದ ಕೆರೆಯ ಸುತ್ತಮುತ್ತಲೂ ವಾಸಿಸುತ್ತಿರುವ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ಇದರಲ್ಲಿಯ ನೀರನ್ನು ಖಾಲಿ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕೊರೊನಾ ತಡೆಗಟ್ಟಲು ಪಟ್ಟಣದ ಗಲ್ಲಿಗಳನ್ನು ಸ್ವಚ್ಚ ಮಾಡಲಾಗಿತ್ತು. ಆದರೆ ಕುಡಿಯುವ ನೀರು, ಪರಿಸರ ಸ್ವಚ್ಚತೆಯ ಸಲುವಾಗಿ ಪುರಸಭೆ ಸಾಕಷ್ಟು ಕಾಳಜಿ ಮಾಡುತ್ತಿದೆ. ಅದರಂತೆ ಈಗ ಐತಿಹಾಸಿಕ ಜೀರಗೇರಿಯಲ್ಲಿನ ನೀರನ್ನು ಖಾಲಿ ಮಡಬೇಕು ಎಂದು ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ, ರೇವಣೇಶ ಹಿರೇಮಠ, ದಲಿತ ಮುಖಂಡ ದಯಾನಂದ ಕಾಳೆ ಆಗ್ರಹಿಸಿದ್ದಾರೆ.
Social Plugin