ಲಾಕ್‍ಡೌನ್‍ನಲ್ಲಿ ಮನೆ-ಮನೆಗೆ ತಲುಪಿಸಿದ ತೃಪ್ತಿ ಈ ವ್ಯಾಪಾರಿಗೆ
-ರಬಕವಿ-ಬನಹಟ್ಟಿ ನಗರಾದ್ಯಂತ ದಿನಸಿ ವಿತರಣೆಯ ಸೇವೆಯಲ್ಲಿ `ನಮ್ಮ ಬಾಸ್ಕೆಟ್’ ಸಂಸ್ಥೆಯು ಹಗಲಿರುಳು ಜನತೆಗೆ ಅವಶ್ಯವಿರುವ ವಸ್ತುಗಳನ್ನು ಪೂರೈಕೆ ಮಾಡುವ ಮೂಲಕ ಜನರಿಗೆ ಕೊರೊನಾ ಸಂದರ್ಭ ಪ್ರಮುಖ ಸೇವೆಯಲ್ಲಿ ತೊಡಗಿ ನಗರದ ಜನತೆಗೆ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಬನಹಟ್ಟಿ ಪಟ್ಟಣವು ಸಂಪೂರ್ಣ ಲಾಕ್‍ಡೌನ್ ನಿಯಮಗಳನುಸಾರ ಎಲ್ಲ ಕಿರಾಣಿ ಮಳಿಗೆಯು ಬಂದ್ ಆಗಿದ್ದವು. ಈ ಸಂದರ್ಭ ಬನಹಟ್ಟಿ ಬಸ್ ನಿಲ್ದಾಣ ಬಳಿಯಿರುವ `ನಮ್ಮ ಬಾಸ್ಕೆಟ್’ ಬಜಾರ್‍ನ ಒಡೆಯ ವಿ.ಎಂ. ಕುಚನೂರ ತಮ್ಮ ಅವಿರತ ಸೇವೆಯಿಂದ ಮನೆ-ಮನೆಗಳಿಗೆ ತೆರಳಿ ಬೆಲೆ ಹೆಚ್ಚಳವಿಲ್ಲದೆ ಪ್ರಾಮಾಣಿಕ ಸೇವೆ ಒದಗಿಸುವ ಮೂಲಕ ಕನಿಷ್ಠ ದಿನಸಿ ಆಹಾರಗಳನ್ನು ಒದಗಿಸುವ ಮೂಲಕ ಭೇಷ್ ಎನ್ನಿಸಿಕೊಳ್ಳುವಲ್ಲಿ ಕಾರಣರಾಗಿದ್ದಾರೆ.