ಬುದ್ಧಿಮಾಂದ್ಯ ಯುವಕನ ರಕ್ಷಣೆಗೆ ಮುಂದಾದ ಸಮೀತಿ





  ತೇರದಾಳ : ಪಟ್ಟಣದಲ್ಲಿ ಬುದ್ಧಿಮಾಂದ್ಯ ಅನಾಥ ಯುವಕನಿಗೆ ಇರಲು ಆಶ್ರಯವಿಲ್ಲದೆ ಕುಸ್ತಿ ಪಳಿಯ ಹತ್ತಿರವಿರುವ ಕಟ್ಟೆಯ ಮೇಲೆ ಇರುತ್ತಿರುವುದನ್ನು ಕಂಡು ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಹಾಗೂ ರೇವಣೇಶ ಹಿರೇಮಠ ಮತ್ತು ಮಲ್ಲಪ್ಪ ಕೌಜಲಗಿ ಸೇರಿ ಇಂದು ಅವನ ಕ್ಷೌರ ಮಾಡಿಸಿ ಜಳಕ ಮಾಡಿಸಿ ಹೊಸ ಬಟ್ಟೆ ತೊಡಿಸಿದರು.

   ಕೊರೊನಾ ಲಾಕ್‍ಡೌನದಿಂದಾಗಿ ಪಟ್ಟಣದಲ್ಲಿ ಎಲ್ಲಿಯೂ ಆಶ್ರಯ ಸಿಗದೆ ಕುಸ್ತಿ ಪಳಿಯ ಹತ್ತಿರವಿರುವ ಕಟ್ಟೆಯ ಮೇಲೆ ದಿನಗಳನ್ನು ಕಳೆಯುತ್ತಿದ್ದ. ಈ ಕುರಿತು ಮಾಧ್ಯಮ ಎರಡು ಸಾರಿ ಸುದ್ದಿಯನ್ನು ಮಾಡಿತ್ತು. ಹಾಗೂ ತಹಶೀಲ್ದಾರ ಪ್ರಶಾಂತ ಚನಗೊಂಡ ಇವರಿಗೂ ಸಹ ಹೇಳಲಾಗಿತ್ತು ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇಂದು ತಾಲೂಕಾ ಹೋರಾಟ ಸಮೀತಿಯ ಪದಾಧಿಕಾರಿಗಳು ಗಣಪತಿ ಇದ್ದಲ್ಲಿಗೆ ಬಂದು ಅವನ ಕ್ಷೌರ ಮಾಡಿಸಿ ಜಳಕವನ್ನು ಮಾಡಿಸಿ ಹೊಸ ಬಟ್ಟೆ ತೊಡಿಸಿದರು. 

 ಬುದ್ಧಿಮಾಂದ್ಯ ಯುವಕನ ಯೋಗಕ್ಷೇಮವನ್ನು ಡಾ. ಶಿವಾನಂದ ಜಾದವರವರು ನೋಡಿಕೊಳ್ಳುತ್ತಿದ್ದರು. ಈಗ ಈ ಕೆಲಸವನ್ನು ತಾಲೂಕಾ ಹೋರಾಟ ಸಮೀತಿಯು ಕೈಗೊಳ್ಳಲು ಮುಂದಾಗಿದೆ. ಅದರೂ ಇವನಿಗೆ ಒಂದು ಆಶ್ರಯದ ಅವಶ್ಯಕತೆ ಇದೆ. ಇನ್ನು ಮಳೆಗಾಲ ಪ್ರಾರಂಭವಾದರೆ ಅವನು ಎಲ್ಲಿ ಇರುವುದು ತಿಳಿಯದಾಗಿದೆ. ಈಗ ಬೇಸಿಗೆ ಕಾಲವಿರುವುದರಿಂದ ಎಲ್ಲಿಯೋ ಮಲಗಿ ಎದ್ದು ತಿರುಗಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಬುದ್ದಿ ಮಾಂದ್ಯ ಯುವಕನ ರಕ್ಷಣೆಗೆ ಮುಂದಾಗಬೇಕಾಗಿದೆ. ದೇವಸ್ಥಾನದಲ್ಲಿ ದಿನಗಳೆಯಬೇಕಾದರೆ ಅವುಗಳು ಸಹ ಈಗ ಬಾಗಿಲು ಮುಚ್ಚಿವೆ. ಇನ್ನಾದರೂ ಈ ಬುದ್ಧಿಮಾಂದ್ಯ ಯುವಕನ ರಕ್ಷಣೆಗೆ ಮುಂದಾಗಬೇಕಾಗಿದೆ. ಆದರೂ ಯುವಕನಿಗೆ ಆಶ್ರಯದೊರಕಿತೆ ಕಾಯ್ದು ನೋಡಬೇಕಾಗಿದೆ.