ಬನಹಟ್ಟಿಯ ಬಸ್ ನಿಲ್ದಾಣದ ಬಳಿ ರಸ್ತೆ ಕಾಮಗಾರಿ ನಡೆಸಲು ಅಗಲೀಕರಣ ಮಾಡುವ ಜಾಗೆ.
ಅಕ್ರಮ ಕಟ್ಟಡ ತೆರವಿಗೆ ನೋಟಿಸ್: ಗೊಂದಲದಲ್ಲಿ ಜನತೆ
ರಬಕವಿ-ಬನಹಟ್ಟಿ,ಮೇ13: ಕುಡಚಿ-ಕಲಾದಗಿ ರಾಜ್ಯ ಹೆದ್ದಾರಿಗೆ ಸಂಬಂಧ ರಬಕವಿ-ಬನಹಟ್ಟಿ ನಗರಸಭೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಸಂಬಂಧ ಸದ್ಯ ಬನಹಟ್ಟಿ ಬಸ್ ನಿಲ್ದಾಣದ ಬಳಿಯ ಕೆಲ ನಿವಾಸಿಗಳಿಗೆ ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿ ಅಕ್ರಮ ಜಾಗೆಯನ್ನು ತೆರವುಗೊಳಿಸಿಕೊಳ್ಳಿ, ಇಲ್ಲವಾದಲ್ಲಿ ಇಲಾಖೆಯಿಂದಲೆ ತೆರವುಗೊಳಿಸಲಾಗುವದೆಂದು ಹೇಳಿರುವದು ಮಾಲಿಕರಲ್ಲಿ ತೀವ್ರ ಗೊಂದಲವನ್ನುಂಟು ಮಾಡಿದೆ.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಯಾನಂದ ಹಿರೇಮಠ ಮಾತನಾಡಿ, ಈಗಾಗಲೇ ಭೂಮಾಪನಾ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ರಸ್ತೆಗೆ ಬೇಕಾಗುಷ್ಟು ಜಾಗೆ ಸಂಬಂಧ ಅಳತೆ ಮಾಡಲಾಗಿದೆ. ಇದಕ್ಕೆ ಸಮಬಂಧ ಕೆಲ ಆಕ್ರಮಣಗೊಳಿಸಿಕೊಂಡ ಜಾಗೆ ಮಾಲಿಕರಿಗೆ ನೋಟಿಸ್ ನೀಡಲಾಗಿದೆ. ಕೊರೊನಾ ಹಾವಳಿಯಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಮೂರ್ನಾಲ್ಕು ದಿನಗಳೊಳಗಾಗಿ ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ಎಂದು ತಿಳಿಸಿದ್ದು, ಇಲ್ಲವಾದಲ್ಲಿ ಇಲಾಖೆಯಿಂದ ಕಾರ್ಯ ನಡೆಯುವದೆಂದು ಸ್ಪಷ್ಟಪಡಿಸಿದ್ದಾರೆ.
ಇತ್ತ ರಸ್ತೆ ಬದಿಯಿರುವ ಮನೆ ಮಾಲಿಕರಿಗೆ ಗೊಂದಲವುಂಟಾಗಿದ್ದು, ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿದವರಿಗೆ ಮಾತ್ರ ನೋಟೀಸ್ ನೀಡುವ ಬದಲಾಗಿ ಎಲ್ಲ ದಾಖಲಾತಿಗಳಿದ್ದು, ಭೂಮಾಪನಾ ಇಲಾಖೆಯ ದಾಖಲೆಗಳಿದ್ದಾಗ್ಯೂ ನೋಟಿಸ್ ನೀಡಿರುವದಕ್ಕೆ ಗೊಂದಲ ಸೃಷ್ಟಿಯಾಗಿದೆ. 
ಈ ಕುರಿತು ರಸ್ತೆ ಕಾಮಗಾರಿಗೆ ಸಂಬಂಧ ಸ್ಪಷ್ಟ ಹಾಗು ಸೂಕ್ತ ದಾಖಲಾತಿಗಳ ಪೀಕಲಾಟದಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುವಲ್ಲಿ ಕಾರಣವಾಗಲಿದ್ದು, ಸರ್ಕಾರ ಸೂಕ್ತ ಕ್ರಮಗಳೊಂದಿಗೆ ಬೇಗನೇ ರಸ್ತೆ ಕಾಮಗಾರಿ ನಡೆಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.