ತೇರದಾಳದ ಶ್ರೀಜೀನಾಚಾರ್ಯ ವಿದ್ಯಾಮಂಡಳದ ಕಲ್ಯಾಣ ಮಂಟಪದಲ್ಲಿ 71 ಜನರ ಕೊರೊಂಟೈನ ಮಾಡಿದ್ದನ್ನು ವೀಕ್ಷಣೆಗೆ ಬಂದಿರುವ ತಹಶೀಲ್ದಾರ ಪ್ರಶಾಂತ ಚನಗೊಂಡ.


ತೇರದಾಳ : ಪಟ್ಟಣದ ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳದ(ಗುರುಕುಲ) ಮಂಗಲ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ ಸುಮಾರು 71 ಜನರನ್ನು ಮಂಗಳವಾರ ತಡರಾತ್ರಿಯಲ್ಲಿ ಕ್ವಾರಂಟೈನ ಮಾಡಲಾಗಿದ್ದು ಅವರಿಗೆ ಬೇಕಾಗುವ ಸೌಲಭ್ಯಗಳನ್ನು ವಿಚಾರಿಸಲು ತಹಶೀಲ್ದಾರ ಪ್ರಶಾಂತ ಚನಗೊಂಡ ಭೇಟಿ ನೀಡಿದ್ದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಟ್ಟಣದ ಸುಮಾರು 71ಜನರು ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆಯಿಂದ ಮಂಗಳವಾರ ತಡ ರಾತ್ರಿ ಬಂದಿದ್ದಾರೆ. ಅವರೆಲ್ಲರನ್ನು ಗುರುಕುಲ ಮಂಗಲ ಕಾರ್ಯಾಲಯದಲ್ಲಿ ಕೊರೊಂಟೈನ್ ಮಾಡಲಾಗಿದೆ. ಈಗಾಗಲೇ ಅವರಿಗೆ ಬೇಕಾಗುವ ಅವಶ್ಯಕ ಸಾಮಗ್ರಿಗಳನ್ನು ಪೂರೈಸಲಾಗಿದೆ. ಅವರಿಗೆ ಸರಕಾರದಿಂದ ಉಚಿತವಾಗಿ ಊಟದ ವ್ಯವಸ್ಥೆಯನ್ನು ಹಾಗೂ ವೈದ್ಯಕೀಯ ಉಪಚಾರವನ್ನು ಮಾಡಲಾಗುತ್ತಿದೆ. ಇಲ್ಲಿರುವಂತ ಎಲ್ಲ ಕಾರ್ಮಿಕರನ್ನು 14ದಿನ ಕೊರೊಂಟೈನ್ ಮಾಡಿ ನಂತರ ಅವರನ್ನು ಚಿಕಿತ್ಸೆಗೆ ಒಳಪಡಿಸಿ ಅವರಲ್ಲಿ ಯಾವುದೇ ರೀತಿಯ ರೋಗದ ಲಕ್ಷಣಗಳು ಇರುವುದಿಲ್ಲ ಎಂಬುವುದನ್ನು ತಿಳಿದ ನಂತರ ಅವರನ್ನು ಅವರವರ ಮನೆಗಳಿಗೆ ಕಳುಹಿಸಲಾಗುವುದು. ಮತ್ತು ಇಲ್ಲಿಗೆ ಬಂದ ಮೇಲೆ ವೈದ್ಯಾಧಿಕಾರಿಗಳು ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಿದ್ದಾರೆ. ಮತ್ತೆ 14ದಿನಗಳು ಮುಗಿದ ನಂತರ ಅವರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದರು.

  ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಸವರಾಜ ಐನಾಪೂರ, ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ, ಪಿಎಸ್‍ಐ ವಿಜಯ ಕಾಂಬಳೆ ಸೇರಿದಂತೆ ಇನ್ನಿತರರು ಇದ್ದರು.