ತೇರದಾಳ :ಪಟ್ಟಣದ ಗುರುಕುಲದಲ್ಲಿ ಸಾಂಸ್ಥಿಕ ಕ್ವಾರಂಟೈನನಲ್ಲಿರುವ ಸುಮಾರು 70 ವಲಸೆ ಕಾರ್ಮಿಕರ  ಗಂಟಲು ದ್ರವ ಮಾದರಿಯನ್ನು  ತಾಲ್ಲೂಕ ವೈದ್ಯಾಧಿಕಾರಿಗಳ ತಂಡ ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳು ಪಡೆದು ಮುಂದಿನ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಟ್ಟರು. ಸುಮಾರು ದಿನಗಳ ಹಿಂದೆ ಮಹಾರಾಷ್ಟ್ರ ರಾಜ್ಯದಿಂದ ಬಂದಿದ್ದ 70 ಜನರನ್ನು ತಾಲ್ಲೂಕ ಆಡಳಿತವು  ಇವರೆಲ್ಲರನ್ನು  ಸ್ಥಳೀಯ ಗುರುಕುಲ ಸಂಸ್ಥೆಯ ಮಂಗಲ ಕಾರ್ಯಾಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸಲಾಗಿತ್ತು.