ರಬಕವಿ-ಬನಹಟ್ಟಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಬಡ ಕಲಾವಿಧರಿಗೆ ಹಾಗೂ ಹಮಾಲಿ ಮಾಡುವ ಕೂಲಿಕಾರರಿಗೆ ಅಗತ್ಯ ದಿನಸಿ ವಸ್ತುಗಳ ವಿತರಣೆ ಮಾಡಲಾಯಿತು.
ಕಡ್ಡಾಯ ಮಾಸ್ಕ ಧರಿಸಿ
*ಯಾರೂ ಹಸಿವಿನಿಂದ ಬಳಲಬಾರದು
ರಬಕವಿ-ಬನಹಟ್ಟಿ,ಮೇ5: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ(ಮುಖಗವಸ) ಧರಿಸಿ ಎಂದು ಮಹಾಲಿಂಗಪುರದ ವೈದ್ಯ ಡಾ. ಎ. ಆರ್. ಬೆಳಗಲಿ ಹೇಳಿದರು.
ಅವರು ನಗರದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಬಡ ಕಲಾವಿಧರಿಗೆ ಹಾಗೂ ಹಮಾಲಿ ಮಾಡುವ ಕೂಲಿಕಾರರಿಗೆ ಅಗತ್ಯ ದಿನಸಿ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗ್ರತರಾಗಿರಬೇಕು. ಬಡವರು ಹಸಿವಿನಿಂದ ಇರಬಾರದು ಎಂದು ಮಾಜಿ ಸಚಿವೆ ಉಮಾಶ್ರೀ ಅಗತ್ಯ ದಿನಸಿ ವಸ್ತುಗಳನ್ನು ನೀಡುತ್ತಿದ್ದು ಅದನ್ನು ಪಡೆದುಕೊಂಡು ಮನೆಯಲ್ಲಿ ಇದ್ದು ಕೋವಿಡ್-19 ತಡೆಗಟ್ಟಲು ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಬನಹಟ್ಟಿ ನಗರ ಘಟಕದ ಅಧ್ಯಕ್ಷ ರಾಜು ಭದ್ರನ್ನವರ, ಸಂಗಪ್ಪ ಕುಂದಗೋಳ ಮಾತನಾಡಿದರು. ರಬಕವಿ-ಬನಹಟ್ಟಿ, ಮಹಾಲಿಂಗಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಸತ್ಯಪ್ಪ ಮಗದುಮ, ಶಂಕರ ಜಾಲಿಗಿಡದ, ಹೂಮಾಯೂನ ಮುಲ್ಲಾ, ಚನಗಿರೆಪ್ಪ ಹಾದಿಮನಿ, ಈಶ್ವರ ಚಮಕೇರಿ, ಸಂಜಯ ಜೀರಗಾಳ, ರಾಹುಲ ಕಲಾಲ ಸೇರಿದಂತೆ ಅನೇಕರು ಇದ್ದರು.
ಬಡವರು ಹಸಿವಿನಿಂದ ಬಳಲುವಂತಾಗಬಾರದು :
ಕೋವಿಡ್-19 ನಿಂದಾಗಿ ಉದ್ಯೋಗವಿಲ್ಲದೇ ಹಲವಾರು ಜನ ಪರದಾಡುವಂತಾಗಿದೆ. ಆ ನಿಟ್ಟಿನಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಕ್ಷೇತ್ರದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದು ಅಗತ್ಯ ದಿನಸಿ ವಸ್ತುಗಳನ್ನು ವಿತರಿಸುತ್ತಿದ್ದಾರೆ ಎಂದು ಬನಹಟ್ಟಿ ನಗರ ಘಟಕದ ಅಧ್ಯಕ್ಷ ರಾಜು ಭದ್ರನ್ನವರ ಹೇಳಿದರು.
ಅವರು ರಬಕವಿಯ ಎಂ. ವಿ. ಪಟ್ಟಣ ಶಾಲೆಯ ಆವರಣದಲ್ಲಿ ಹಡಪದ ಸಮಾಜ, ಕೂಲಿ ಕಾರ್ಮಿಕರು ಹಾಗೂ ಹಮಾಲರ ಸಂಘದ ಸದಸ್ಯರಿಗೆ ದಿನನಿತ್ಯದ ಅಗತ್ಯ ವಸ್ತುಗಳ ದಿನಸಿ ವಿತರಿಸಿ ಮಾತನಾಡಿದರು. ಸದ್ಯ ದಿನಸಿವಸ್ತುಗಳನ್ನು ವಿತರಿಸಲಾಗುತ್ತಿದ್ದು ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಸಹಾಯವನ್ನು ಮಾಡಲಾಗುವುದು ಎಂದರು.

Social Plugin