ಹಸಿದವರನ್ನು ಗುರ್ತಿಸಿ ಕೈಹಿಡಿಯುವ ಜವಾಬ್ದಾರಿ ಸರ್ಕಾರದ ಮೇಲಿದೆ.

ತೇರದಾಳ: ಕೊರೊನಾ ವೈರಸ್‍ದಿಂದ ದೇಶದಲ್ಲಿ ತಲ್ಲಣವಾಗಿದೆ. ಜನತೆ ಇದರಿಂದ ಹೈರಾಣಾಗಿದ್ದಾರೆ.ಸರಕಾರವು ಯಾರಿಗೂ ಹೊರಗೆ ಬರಲು ಅನುಮತಿ ನೀಡುತ್ತಿಲ್ಲ. ಕಣ್ಣಿಗೆ ಕಾಣದ ಈ ಹೆಮ್ಮಾರಿ ವೈರಸ್ ಎಲ್ಲಾ ವರ್ಗದ ಜನರ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ,ಯಾರ್ಯಾರು ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದು ಅವರಿಗೆ ಗೊತ್ತು ಅಥವಾ ಆ ದೇವರಿಗೆ ಗೊತ್ತು. ನೂರಾರು ಕೋಟಿ    ಜನಸಂಖ್ಯೆ ಹೊಂದಿದ ಈ ನಮ್ಮ ನಾಡಿನಲ್ಲಿರುವ ಜನತೆ ಒಂದಲ್ಲ,ಎರಡಲ್ಲ ನೂರಾರು ವೃತ್ತಿಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ.ಪ್ರಸ್ತುತವಾಗಿ ಯಾರ ಪರಿಸ್ಥಿತಿ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ ಯಾರಲ್ಲೂ ದಾಖಲೆಯು ಇಲ್ಲ.ಆದರೆ ಸರಕಾರ ಮಾತ್ರ ಕೆಲವೆ ಕೆಲವು ವರ್ಗಗಳನ್ನು ಹಿಡಿದು ಲೆಕ್ಕಮಾಡಿ ಇವರೇ ಬಡವರು, ಇವರಿಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ ಎಂದು ತಿರ್ಮಾನಿಸಿ ಆರ್ಥಿಕ ಸಹಾಯ ನೀಡಲು ಕ್ರಮ ಕೈಕೊಂಡಿದೆ, ಸರಕಾರದ ಈ ಕ್ರಮಕ್ಕೆ ಧನ್ಯವಾದ ಹೇಳಲೇಬೇಕಾಗುತ್ತದೆ.ಏಕೆಂದರೆ ಅವರೂ ಸಹ ನಮ್ಮವರೆ. ಆದರೆ ಇವರನ್ನೂ ಹೊರತು ಪಡಿಸಿ    ಇನ್ನೂ ಸಾಕಷ್ಟು ಕಾರ್ಮಿಕರು, ನಿರುದ್ಯೋಗಿಗಳು, ಸಮಾಜಸೇವಕರು ,ಡಿ.ಟಿ.ಪಿ. ಮಾಡುವವರು,    ,ಟೈಪರೈಟರುಗಳು, ವಿವಿಧ ಇಲಾಖೆಯ ಕಚೇರಿಗಳ ಮುಂದೆ ಅರ್ಜಿ ಬರೆದು ಜೀವನ ಸಾಗಿಸುವವರು,

ಝೆರಾಕ್ಸ ಮಾಡುವವರು,ಛಾಯಾ ಚಿತ್ರಗಾರರು ಹೀಗೆ ಬರೆಯುತ್ತಾ ಹೋದರೆ ದೊಡ್ಡ ಪಟ್ಟಿಯೇ ತಯಾರಾಗಬಹುದು.ಈ ಎಲ್ಲ ಕುಟುಂಬಗಳ ಕೈ ಖಾಲಿಯಾಗಿ, ಸಹಾಯಕ್ಕಾಗಿ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಕೈ ಚಾಚಿದ್ದಾರೆ.ಆದರೆ ಅದನ್ನು ಬೆಂಗಳೂರಿನ ವಿಧಾನಸೌಧದವರೆಗೆ ಮುಟ್ಟಿಸುವ ಕೆಲಸವಾಗಬೇಕಾಗಿದೆ.ಎಕೆಂದರೆ ಎಲ್ಲರೂ ಬದುಕಬೇಕಾಗಿದೆ, ಎಲ್ಲರ ಬದುಕನ್ನು ಉಳಿಸುವುದಕ್ಕಾಗಿಯೇ ಸರಕಾರ ಲಾಕಡೌನ ಮಾಡಿದೆ. ಆದರೆ ಬರಿ ಲಾಕಡೌನ ಮಾಡಿದರೆ ಬದುಕಲು ಸಾದ್ಯವೆ? ಎಲ್ಲರನ್ನೂ ರಕ್ಷಣೆ ಮಾಡುವ ಪಣ ತೊಟ್ಟರುವ ಸರಕಾರವು ಎಲ್ಲರನ್ನೂ ಪರಿಗಣಿಸಿ ಎಲ್ಲರಿಗೂ ಬದುಕಲು ಅವಕಾಶ ಕಲ್ಪಿಸಿ ಕೊಡುವ ಕೆಲಸವಾಗಬೇಕಾಗಿದೆ.ಈ ಕುರಿತು ತೇರದಾಳ ವಲಯದ ಛಾಯಾಚಿತ್ರ ಗ್ರಾಹಕರ ಸಂಘದವರು ಸಹ ಲಾಕಡೌನದಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿರುವಂತಹ ಪರಿಸ್ಥಿತಿ ಇದ್ದು ಜೀವನ ನಡೆಸುವುದು ತೊಂದರೆಯಾಗಿದ್ದು,ಉದ್ಯೋಗಕ್ಕಾಗಿ ಮಾಡಿದ ಸಾಲ ,ಅಂಗಡಿ ಬಾಡಿಗೆ,ವಿದ್ಯುತ್ ಬಿಲ್  ಹೀಗೆ ಆರ್ಥಿಕವಾಗಿ ತುಂಬಾ ತೊಂದರೆಗಿಡಾಗಿದ್ದು ಕಾರಣ ಸರಕಾರದಿಂದ ಆರ್ಥಿಕ ನೆರವು ಕೊಡಿಸಬೇಕೆಂದು ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರಿಗೆ ಮನವಿ ನೀಡಿದರು,  ಸಂದರ್ಭದಲ್ಲಿ ಸಂಘದ ಅದ್ಯಕ್ಷ ಸಂಗಮೇಶ ನೀಲವಾಣಿ ಹಾಗೂ ಸಂಘದ ಸದಸ್ಯರಿದ್ದರು.

ವರದಿ: ಕೆ,ಎಸ್.ರಂಗಸ್ವಾಮಿ.