ಜಮಖಂಡಿ: ಕರೋನಾ ವೈರಸದಿಂದ ಜಮಖಂಡಿ ನಗರವು ಅಕ್ಷರಸಹ ತಲ್ಲಣಿಸಿ ಹೋಗಿದೆ.ಜನರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.ಇಡಿ ಜಮಖಂಡಿ ನಗರವು ಮೌನವಾಗಿದೆ. ದೇಶದಲ್ಲಿ ಲಾಕಡೌನ ಆದಕಾರಣ ಯಾರು ಮನೆಯಿಂದ ಹೊರಬರುವಂತಿಲ್ಲ ಹೀಗಾಗಿ ಬಡವರ ಬದುಕು ಅಯೋಮಯವಾಗಿದೆ.ಸುಮಾರು ತಿಂಗಳಿನಿಂದ ಎಲ್ಲರ ಮನೆಬಾಗಿಲುಗಳು ಬಂದಾಗಿವೆ. ಮನೆಯಿಂದ ಹೊರಬಂದರೆ ಕೊರೊನಾ ಮನಯೊಳಗೆ ಬರುತ್ತದೆ ಇದರಿಂದ ಜನರು ದಿಕ್ಕು ತೋಚದೆ ಜನತೆ ಕಂಗಾಲಾಗಿದೆ.ಬದುಕನ್ನು ಹೇಗೆ ನಡೆಸಬೇಕು ಎಂಬ ಚಿಂತೆಯಲ್ಲಿರುವ ಕೆಲವು ಕುಟುಂಬಗಳಿಗೆ ಅಪದ್ಭಾಂತವರಂತೆ ಬಂದ ಸೇವಾ ಸದನ ಸಂಘ ಜಮಖಂಡಿ ಇವರು ಕುಟುಂಬಗಳಿಗೆ ಆಹಾರದ ಕಿಟ್ಟನ್ನು ವಿತರಣೆ ಮಾಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ.ಸುಮಾರು 47 ದಿನಗಳಿಂದ ನಿರಂತರವಾಗಿ ಈ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಲಾಖೆಯ ಸಹಕಾರದೊಂದಿಗೆ ಜನರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತೆಯನ್ನು ಮೂಡಿಸುತ್ತಿದ್ದಾರೆ. ಅಷ್ಟೆ ಅಲ್ಲದೆ ಕೊರೊನಾ ಜಾಗೃತಿಗೆ ಸಂಬಂಧಿಸಿದಂತೆ ಮುಂಜಾಗೃತೆ ಪ್ರಯುಕ್ತ ಸುಮಾರು 6450 ಮಾಸ್ಕಗಳನ್ನು ನೀಡಿದ್ದಾರೆ. ನಿನ್ನೆ ದಿನಾಂಕ 8-5-2020 ಶುಕ್ರವಾರ ದಿವಸ ಜಮಖಂಡಿಯ ಮುತ್ತಿನಕಂತಿಮಠ ಶ್ರೀಗಳ ಸಹಾಯಹಸ್ತದಿಂದ ಸುಮಾರು 479 ಕುಟುಂಬಗಳಿಗೆ ಆಹಾರದ ಕಿಟ್‍ಗಳನ್ನು ವಿತರಿಸಿದ್ದಾರೆ. ನೊಂದವರಿಗೆ ಸಹಾಯಮಾಡುವ ನೋಭಾವ ಹೊಂದಿಹಾಗೂ ಎ.ಬಿ.ವ್ಹಿ.ಪಿ.ಹಿರಿಯ ಕಾರ್ಯಕರ್ತರು ಹಾಗೂ ಸೇವಾ ಸದನ ಸಂಘದ ಅಧ್ಯಕ್ಷ ಪ್ರದೀಪ ಮೆಟಗುಡ್ಡ ಹಾಗೂ ಕಿರಣ ಮೇಟಿ, ರಘು ಲಗಲಿ,ಶಶಾಂಕ ಹಿರೇಮಠ,ಮಂಜು ನಾವಿ ಶೂರ್ಪಾಲಿ,ಆನಂದ ಗಡಕರ,ಪ್ರದೀಪ ಸಿಂಗಾರಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ, ಇವರ ಈ ಸೇವೆಯನ್ನು ಎಲ್ಲರೂ ಪ್ರಶಂಸಿದ್ದಾರೆ.
Social Plugin