ಹರಳಯ್ಯ ಸಮಾಜದ ವತಿಯಿಂದ ಕಿರಾಣಿ ದಿನಸಿ ಕಿಟ್ ವಿತರಣೆ......
ವರದಿ: ಪ್ರಭು ಜೈನರ
ತೇರದಾಳ: ಪಟ್ಟಣದಲ್ಲಿ ಕೊವಿಡ್-19 ರ ಪ್ರಯುಕ್ತ ಹರಳಯ್ಯ ಸಮಾಜದ ವತಿಯಿಂದ ತಮ್ಮ ಗಲ್ಲಿಯಲ್ಲಿರುವ ಎಲ್ಲ ಸಮಾಜದ ಸುಮಾರು 30 ಕುಟುಂಬಗಳ ಕಡುಬಡವರಿಗೆ ಕಿರಾಣಿ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿದರು. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಪಟ್ಟಣದಲ್ಲಿಯೇ ಸಣ್ಣ ಸಮಾಜವಾದ ಹರಳಯ್ಯ ಸಮಾಜದವರ ಕಾರ್ಯ ಶ್ಲಾಘನೀಯವಾಗಿದೆ. ಕೊರೋನ ವೈರಸನಿಂದ ದೇಶವೆಲ್ಲ ಲಾಕಡೌನ ಆದ ಹಿನ್ನೆಲೆಯಲ್ಲಿ ಪ್ರತಿದಿನ ಕೂಲಿ ಕೆಲಸ ಮಾಡಿ ಬದುಕುವ ಸಾಗಿಸುವ ಬಡವರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ ಬಡವರಿಗೆ ಅಕ್ಕಿ, ಗೋಧಿಗಳನ್ನು ಕೊಟ್ಟಿದೆ ಆದರೆ ಜೀವನ ನಡೆಸಲು ಅವರೆಡರಿಂದ ಸಾಧ್ಯವಿಲ್ಲ, ಕುಟುಂಬ ಎಂದ ಮೇಲೆ ಎಲ್ಲ ರಿತೀಯ ಸಾಮಗ್ರಿಗಳು ಅವಶ್ಯವಾಗಿರುತ್ತವೆ. ಅದರಂತೆ ಸ್ಥಳೀಯ ಹರಳಯ್ಯ ಸಮಾಜದವರು ತಮ್ಮ ಗಲ್ಲಿಯಲ್ಲಿನ ಸುಮಾರು 30 ಕುಟುಂಬಳಿಗೆ ಜೋಳ-5ಕೆಜಿ, ಗೋಧಿ ಹಿಟ್ಟು-4ಕೆಜಿ, ಸಕ್ಕರೆ-1ಕೆಜಿ, ಗಾನದ ಎಣ್ಣೆ-1ಕೆಜಿ, ಅಕ್ಕಿ-1ಕೆಜಿ, ತೊಗರಿಬೇಳೆ-1/2ಕೆಜಿ, ಹೇಸರುಕಾಳು-1/2ಕೆಜಿ, ಚಹಾಪುಡಿ-1/4ಕೆಜಿ, ಕೊಬ್ಬರಿ ಎಣ್ಣೆ, ಕೊಲ್ಗೇಟ, ಬಟ್ಟೆಸೋಪು, ಮೈಕೈ ಸೋಪು, ಉಪ್ಪು ಮತ್ತು 2020ಬಿಸ್ಕೀಟಗಳ ಕಿರಾಣಿ ದಿನಸಿ ಕಿಟ್‍ಗಳನ್ನು ತಯಾರಿಸಿ ಉಚಿತವಾಗಿ ವಿತರಣೆ ಮಾಡಿದರು. ಇಂತಹ ದಾನಿಗಳ ಅವಶ್ಯಕತೆ ಇನ್ನೂ ಇದೆ, ಇನ್ನೂ ಅನೇಕ ಶ್ರೀಮಂತ ಸಮಾಜಳಿವೆ ಮತ್ತು ಶ್ರೀಮಂತರೂ ಇದ್ದಾರೆ ಅವರೂ ಕೂಡಾ ಕಡುಬಡವರನ್ನು ಪತ್ತೆ ಹಚಿ,್ಚ ಅವಶ್ಯಕವಿರುವ ವಸ್ತುಗಳನ್ನು ಕೊಟ್ಟು ನೆರವಾಗಬೇಕೆಂದು ವಿನಂತಿಸುತ್ತೇವೆ. ಸರಕಾರದ ಜೊತೆ ಎಲ್ಲ ಸಮಾಜದವರು ಕೈಜೋಡಿಸಿ ಕೆಲಸ ಮಾಡಿದರೆ ಇಂತಹ ಸಾವಿರ ವೈರಸಗಳ ವಿರುದ್ದ ಹೋರಾಡಬಹುದಾಗಿದೆ. ಈ ಸಂಧರ್ಭದಲ್ಲಿ ಹರಳಯ್ಯ ಸಮಾಜದ ಪ್ರಮುಖರು, ಯುವಕರು ಉಪಸ್ಥಿತರಿದ್ದರು.
Social Plugin