-ರಬಕವಿ-ಬನಹಟ್ಟಿಯಲ್ಲಿ ಶ್ರಮಿಕರಿಂದ ನಿರ್ಗತಿಕ ಕುಟುಂಬಗಳಿಗೆ ದಿನಸಿ ಹಾಗು ತರಕಾರಿ ಪೊಟ್ಟಣ ನೀಡಲಾಯಿತು.

ಶ್ರಮಿಕರಿಂದ ದಿನಸಿ ಕಿಟ್ ವಿತರಣೆ
ರಬಕವಿ-ಬನಹಟ್ಟಿ,ಮೇ10: ಕೊರೊನಾ ವೈರಸ್‍ನ ಲಾಕ್‍ಡೌನ್ ಎಂಥವರನ್ನೂ ಮನಕಲಕುವಂತೆ ಮಾಡಿದ್ದಂತು ಸತ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಳ್ಳವರು ಎಡೆಬಿಡದೆ ದಾನದಲ್ಲಿ ತೊಡಗಿದ್ದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಷ್ಟಕಷ್ಟೆ ದುಡಿಮೆಯಲ್ಲಿ ಉಳಿದ ಹಣದಲ್ಲಿ ಕೆಲ ಶ್ರಮಿಕ ವ್ಯಕ್ತಿಗಳೂ ಸಹಿತ ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುವಲ್ಲಿ ಕಾರಣವಾಗಿದೆ.
ಪಟ್ಟಣದ ಅಶೋಕ ಕಾಲನಿಯ ಸದಾಶಿವ ಪರೀಠ, ಶ್ರೀಶೈಲ ಗಸ್ತಿ, ಬಸವಂತ ಟಿರ್ಕಿ  ಸ್ನೇಹಿತರು ಸೇರಿ ಪಟ್ಟಣದ ನೂರಕ್ಕೂ ಅಧಿಕ ನಿರ್ಗತಿಕರಿಗೆ ಮನೆ-ಮನೆಗೆ ತೆರಳಿ ದಿನಸಿ ಹಾಗು ತರಕಾರಿ ಪೊಟ್ಟಣಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.