ರಬಕವಿ-ಬನಹಟ್ಟಿ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೈನ ಮುನಿ ಕುಲರತ್ನಭೂಷಣ ಮಹಾರಾಜರು ಇದ್ದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ
ರಬಕವಿ-ಬನಹಟ್ಟಿ,ಮೇ28: ಕೊರೊನಾದ ಅಟ್ಟಹಾಸದ ನಡಿಗೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನಭೂಷಣ ಮಹಾರಾಜರು ತಿಳಿಸಿದರು.
ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಆಚಾರ್ಯ ಶ್ರೀ 18 ನೇ ಜ್ಯನೇಶ್ವರಿ ದೀಕ್ಷಾ ಜಯಂತಿ ನಿಮಿತ್ತ ಶುಶ್ರೋಶಕಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ತಮ್ಮ ಜೀವದ ಹಂಗುತೊರೆದು ದೇಶದ ಪ್ರಜೆಗಳ ಜೀವ ರಕ್ಷಣೆಗೆ ನಿಂತ ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯಕೂಡಾ ಆಗಿದೆ ಎಂದು ಮನಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಹುಕ್ಕೇರಿಯ ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಹಾಗೂ ನಮ್ಮೆಲ್ಲರಿಗೆ ಮಾರಕವಾಗಿರುವ ಕರೊನಾವನ್ನು ಹೊಡೆದೋಡಿಸಲು ನಾವೆಲ್ಲ ಸಾಮಾಜಿಕ ಅಂತರಕಾಪಾಡಿಕೊಳ್ಳುವುದೊಂದೆ ಇದಕ್ಕೆ ಪ್ರಮುಖ ಔಷಧಿಯಾಗಿದೆ. ಅದರಲ್ಲೂ ವೈಧ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ ಭದ್ರಗಿರಿ ಬೆಟ್ಟದವತಿಯಿಂದ "ಆದರ್ಶ ಸೇವಾ ರತ್ನ" ಪ್ರಶಸ್ತಿ ನೀಡಿದ್ದು ಸಂತಸ ತಂದಿದೆ ಎಂದರು.
ಸಮಾರಂಭದಲ್ಲಿ ರಬಕವಿ ಬನಹಟ್ಟಿ, ಹೊಸೂರ, ರಾಂಪುರ, ಹಳಿಂಗಳಿ, ಹನಗಂಡಿ ಮತ್ತು ತೇರದಾಳ ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಸೇವೆ ಮಾಡುವ ಶುಶ್ರೋಶಕಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗಿಯಾಗಿ ಸನ್ಮಾನ ಸ್ವಿಕರಿಸಿದರು.
ಜಿಪಂ ಸದಸ್ಯೆ ಲಲೀತಾ ನಂದೆಪ್ಪನವರ, ಬಿ. ಡಿ. ನೇಮಗೌಡ, ಪದ್ಮಾವತಿ ಹಜಾರೆ, ಶೀತಲ ಚವಜ, ಗಣಪತರಾವ ಹಜಾರೆ, ಚಂದ್ರಕಾಂತ ಭೋಜೆಪಾಟೀಲ, ಅಮೀತ ಕರೆಪ್ಪನವರ, ಸರಸ್ವತಿ ದೇಸಾಯಿ, ಪಿಡಿಒ ಎನ್. ಎಸ್. ಪತ್ರಿ, ಮಹಿಳಾ ಪೊಲೀಸ್ ಕಾನ್ಸಸ್ಟೇಬಲ್ ಎಚ್. ಎಸ್. ಚಲವಾದಿ, ತೇರದಾಳ ಠಾಣೆಯ ಕಾನ್ಸಸ್ಟೇಬಲ್ ಎಸ್. ಐ. ಸೋನೊನೆ, ಗ್ರಾಪಂ ಉಪಾಧ್ಯಕ್ಷೆ ಕಲಾವತಿ ಕುಳ್ಳಿ, ಮಹಾವೀರ ನೀಲಜಗಿ ಸೇರಿದಂತೆ ಅನೇಕರಿದ್ದರು.  


-  ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ.... 

ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....