ರಬಕವಿ ಶ್ರೀನಿವಾಸ ಚಿತ್ರ ಮಂದಿರದ ಎದುರಿಗಿರುವ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಮುಗಿಬಿದ್ದ ಜನ.
ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಮೀನು ಮಾರಾಟ
ರಬಕವಿ-ಬನಹಟ್ಟಿ,ಮೇ28: ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕೆ ಅನೇಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ನಮ್ಮ ಜನಕ್ಕೆ ಜೀವಕ್ಕಿಂತ ಮುಖ್ಯವಾಗಿ ತಿನ್ನಲು ಹಪಹಪಿಸುತ್ತಾ, ಸಂದಿಗ್ಧ ಪರಿಸ್ಥಿತಿಯ ನಿಯಮಗಳನ್ನು ಗಾಳಿಗೆ ತೂರುತ್ತಿರುವದು ಸೋಜಿಗದ ಸಂಗತಿ.
ರಬಕವಿ ಶ್ರೀನಿವಾಸ ಚಿತ್ರಮಂದಿರದ ಎದುರಿಗಿರುವ ಮೀನು ಮಾರುಕಟ್ಟೆಯಲ್ಲಿ ಮೀನು ಖರೀಧಿಸಲು ಒಬ್ಬರಮೇಲೆಬ್ಬರು ಬಿದ್ದು ಖರೀಧಿಸುತ್ತಿದ್ದಾರೆ. ಸಮಾಜಿಕ ಅಂತರವಂತು ಇಲ್ಲವೇ ಇಲ್ಲ. ನಗರಸಭೆ ಸಿಬ್ಬಂದಿಗಳು ನಿತ್ಯ ಧ್ವನಿ ವರ್ದಕದ ಮೂಲಕ ಲಾಕ್‍ಡೌನ್ ಸಂಬಂದಿಸಿದಂತೆ ಅನೇಕ ಸಂದೇಶಗಳನ್ನು ಸಾರ್ವಜನಿಕರಿಗೆ ತಿಳಿ ಹೇಳುತ್ತಿದ್ದಾರೆ. ಇದಕ್ಕೆ ಖ್ಯಾರೇ ಎನ್ನದ ಜನ ಸಿಗುತ್ತೋ ಇಲ್ಲೊ ಎಂಬಂತೆ ಮೀನು ಖರೀದಿಯಲ್ಲಿ ತೊಡಗಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಯಾರೋಬ್ಬರೂ ಮಾಸ್ಕ್ ಕೂಡಾ ಧರಿಸಿಲ್ಲ. ತಾಲೂಕಾ ಆಢಳಿತಾಧಿಕಾರಿಗಳು ಇಂಥಹ ಜನನೀಬೀಡ ಪ್ರದೇಶಗಳಲ್ಲಿ ಜನ ಗುಂಪು ಗುಂಪಾಗಿ ಸೇರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಳೆದವಾರದಿಂದ ಅನೇಕ ರಾಜ್ಯಗಳಿಂದ ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಬಂದು ನಗರವನ್ನು ಸೇರುತ್ತಿದ್ದಾರೆ. ಇಂಥಹ ಗುಂಪುಗಾರಿಕೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಸ್ಥಳಗಳಲ್ಲಿ ಸೊಂಕು ಹರಡಿದರೆ ಏನು ಮಾಡಲು ಸಾಧ್ಯವೇ ಇಲ್ಲ. ಇಂಥವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಇಲ್ಲಿನ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.


-  ತಪ್ಪದೇ ನಮ್ಮ "ಸ್ವರೂಪ ಸಂದರ್ಶನ " ಫೇಸ್ಬುಕ್ ಪೇಜ್ ಲೈಕ್ ಮಾಡಿ ಜೊತೆಗೆ ಯೌಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ.... 

ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ : 9902523698....