ಕಾಂಗ್ರೆಸ್ ಯುವ ನಾಯಕ ಕೃಷ್ಣಾ ಲೆಂಡಿ ಪಕ್ಷ ತೊರೆದು ಬಿಜೆಪಿಗೆ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಸೇರ್ಪಡೆಗೊಂಡರು.
ಲಾಕ್‍ಡೌನ್ ಮಧ್ಯೆಯೂ ರಾಜಕೀಯ ಪ್ರಕ್ರಿಯೆ
ಕಾಂಗ್ರೆಸ್ ಮುಖಂಡ ಬಿಜೆಪಿ ತೆಕ್ಕೆಗೆ
ರಬಕವಿ-ಬನಹಟ್ಟಿ,ಮೇ17: ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಮಧ್ಯೆಯೂ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ನಡೆಯುತ್ತಿರುವದು ವಿಶೇಷ.
ರವಿವಾರ ಹೊಸೂರಿನ ಕಾಂಗ್ರೆಸ್ ಪಕ್ಷದ ಯುವನಾಯಕ ಕೃಷ್ಣಾ ಲೆಂಡಿ, ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಇದೇ ಸಂದರ್ಭ ಮಹಾದೇವಿ ಚೋಳಿ, ಶಂಕರ ಭುಜರುಕ್, ಮಹಾನಿಂಗ ಯಳಸಂಗ, ಯಂಕಣ್ಣ ಮೇಲಗಿರಿ, ನಾಮದೇವ ಆಲಗೂರ, ಮಂಜು ಲೆಂಡಿ, ಅರುಣ ಬುದ್ನಿ, ಪಾಂಡು ಹಿಪ್ಪರಗಿ, ಗಿರಮಲ್ಲಪ್ಪ ಬಾಗೇವಾಡಿ, ರಾಜು ಅಂಬಲಿ, ಕುಮಾರ ಕದಂ, ಈಶ್ವರ ನಾಗರಾಳ ಇದ್ದರು.
ನಾಲ್ವರು ಆರೋಪಿಗಳ ಬಂಧನ: ಕಳೆದ ದಿ.15 ರಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಬನಹಟ್ಟಿಯ ಅಶೋಕ ಕಾಲನಿಯ ನಗರಸಭೆ ಮಳಿಗೆಯೊಂದರಲ್ಲಿ ನಾಲ್ವರು ಜನರು ಹಸುಗಳನ್ನು ಕೊಂದು ಅವುಗಳ ಮಾಂಶ ಮಾರಾಟ ಮಾಡುತ್ತಿದ್ದರು. ಸಾರ್ವಜನಿಕರಿಗೆ ಸೋಂಕು ಹರಡಿ ಸಾರ್ವಜನಿಕರು ಅನಾರೋಗ್ಯಕ್ಕೀಡಾಗುವದು ಹಾಗು ಒಬ್ಬರಿಂದ ಮತ್ತೊಬ್ಬರಿಗೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಬಹುದೆಂದು ಗೊತ್ತಿದ್ದರೂ ಈ ಕೃತ್ಯವೆಸಗಿರುವದಕ್ಕೆ ನಾಲ್ವರು ಆರೋಪಿತರಾದ ಇಕ್ಬಾಲ್ ಬೇಪಾರಿ, ಮುಸ್ತಕಿಮ್ ಬೇಪಾರಿ, ಸುಭಾನ ಬೇಪಾರಿ ಹಾಗು ಪೀರಸಾಬ್ ಬೇಪಾರಿಯನ್ನು ಬಂಧಿಸುವಲ್ಲಿ ಬನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಸುವನ್ನು ಮರಣಪಡಿಸಿದನ್ವಯ ಪ್ರಕರಣ ದಾಖಲಿಸಿದ್ದು, ಆ ಸಂದರ್ಭದಲ್ಲಿದ್ದ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ತನಿಖೆ ಮುಂದುವರೆಸಿದ್ದಾರೆ.

Social Plugin