ಕೊರೊನಾ ಪರಿಸ್ಥಿತಿ ಎದುರಿಸಲು ನಿಧಿ ಸಂಗ್ರಹ
ರಬಕವಿ-ಬನಹಟ್ಟಿ,ಮೇ17: ಕೊರೊನಾ, ಲಾಕ್‍ಡೌನ್‍ನಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವದಕ್ಕಾಗಿ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಪಕ್ಷದ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿ ದೇಣಿಗೆ, ನಿಧಿ ಸಂಗ್ರಹ ನಡೆಸಲಾಗುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರವಿವಾರ ಪಟ್ಟಣದ ಈಶ್ವರಲಿಂಗ ಮೈದಾನದಲ್ಲಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಘಟನೆಯ ಸಾಮಥ್ರ್ಯವನ್ನು ಜನರ ಒಳಿತಿಗಾಗಿ ಬಳಸಿಕೊಳ್ಳುವದಕ್ಕೆ ಇದು ಒಂದು ಒಳ್ಳೆಯ ಅವಕಾಶವಾಗಿದ್ದು, ಈಗಾಗಲೇ ಸಾಕಷ್ಟು ಜನ ವಿವಿಧ ರೀತಿಯಲ್ಲಿ ಸೇವೆ ಮಾಡಿದ್ದಾರೆ. ಮತ್ತಷ್ಟು ಬಲಗೊಳಿಸಿದ್ದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ದೂರ ಮಾಡಲು ಸಾಧ್ಯವೆಂದರು.
ಇದೇ ಸಂದರ್ಭ ಪಕ್ಷದ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್, ಮಲ್ಲಿಕಾರ್ಜುನ ಬಾಣಕಾರ, ಸಿದ್ದನಗೌಡ ಪಾಟೀಲ, ನಂದು ಗಾಯಕವಾಡ, ರವಿ ಕರಲಟ್ಟಿ, ಗೋವಿಂದ ಡಾಗಾ, ಸುರೇಶ ಕೋಲಾರ, ಡಾ. ಪಿ.ವಿ. ಪಟ್ಟಣ, ರಾಮದಾಸ ಸಿಂಗನ್, ಯೂನಸ್ ಚೌಗಲಾ, ವಿಶ್ವನಾಥ ಸವದಿ, ಬಸಯ್ಯ ಹಿರೇಮಠ, ಈಶ್ವರ ಕಾಡದೇವರ, ಬಾಳು ಗಣೇಶನವರ, ಆನಂದ ಕಂಪು ಸೇರಿದಂತೆ ಅನೇಕರಿದ್ದರು.