ರಬಕವಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಮಾಶಾಸನ ವಿತರಿಸಲಾಯಿತು.
ಕಷ್ಟದ ಪರಿಸ್ಥಿತಿಯಲ್ಲಿ ಸಹಾಯಧನ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ.
ರಬಕವಿ-ಬನಹಟ್ಟಿ,ಮೇ18: ಸಮಾಜದಲ್ಲಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿಇರುವ ಪಲಾನುಭವಿಗಳಿಗೆ ರಾಜ್ಯಾದಾದ್ಯಂತ 8 ಸಾವಿರಕ್ಕೂ ವೀರಿದ ನಿರ್ಗತಿಕರಿಗೆ ಪ್ರತಿ ತಿಂಗಳು 750 ರಿಂದ 1000 ರೂ. ವರೆಗೆ ಮಾಸಿಕ ಮಾಶಾಸನವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ನೀಡುತ್ತಿದ್ದು ಅವುಗಳಲ್ಲಿ ಜಮಖಂಡಿ ತಾಲೂಕಿನಲ್ಲಿ 61 ಫಲಾನುಭವಿಗಳಿಗೆ ಮಂಜುರಾದ ಸಹಾಯಧನವನ್ನು ಲಾಕಡೌನ್ ಸಂಧರ್ಭದಲ್ಲಿಜೀವನ ನಡೆಸಲು ಕನಿಷ್ಟ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಮಾಶಾಸನ ವಿತರಿಸಲಾಗುತ್ತಿದೆಎಂದು ಜಮಖಂಡಿತಾಲೂಕಿನ ಯೋಜನಾಧಿಕಾರಿಗಳಾದ ಬಾಲಕೃಷ್ಣ ಬಿ. ಅವರು ಹೇಳಿದರು.
ಅವರು ರಬಕವಿ ವಿದ್ಯಾನಗರ ಬಡಾವಣೆಯಲ್ಲಿ 3 ಜನ ಫಲಾಬವಿಗಳಿಗೆ ಮಾಶಾಸನ ವಿತರಿಸಿ ಮಾತನಾಡಿದರು. ಕೋವಿಡ್-19 ವೈರಸ್ ನಿಂದ ಮುಕ್ತಿ ಪಡೆಯಲು ಪ್ರತಿ ವ್ಯಕ್ತಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ಸರ್ಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಕಿವಿ ಮಾತು ಹೇಳಿದರು.
ರಬಕವಿ ಪೋಲಿಸ್ ಠಾಣೆಯ ಎಎಸ್‍ಐ ಪುರಂಧರ ಪೂಜಾರಿ ಮಾಶಾಸನ ಮಂಜುರಾದ ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿ, ಧಾನ-ಧರ್ಮಗಳಿಗೆ ಶ್ರೇಷ್ಟವಾಗಿರುವ ಧರ್ಮಸ್ಥಳವು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಕಾರ್ಯಕ್ರಮಗಳಿಗೆ ನಿರಂತರವಾಗಿ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಮುತ್ತು ಯಲ್ಲಟ್ಟಿ, ಶಿವಾನಂದ ಕೆ., ರಬಕವಿ ವಲಯದ ಮೇಲ್ವಿಚಾರಕರಾದ ಪ್ರಭಾವತಿ ವೈ. ಸೇವಾಪ್ರತಿನಿದಿಯಾದ ಸವಿತಾ ಹೊಸುರು ಮತ್ತು ಸಹಾಯಕರಾದ ಸುವಿದಾ ಇದ್ದರು.

Social Plugin