ಮಾನವೀಯತೆ ಮೆರೆದ ಯೋಧ: 
ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ರಬಕವಿ-ಬನಹಟ್ಟಿ,ಮೇ18: ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಬಡ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ಅರಿತು ಪಟ್ಟಣದ ಯೋಧ ಆನಂದ ಕುಮಾರ ಬಿಳ್ಳೂರ ಸದ್ಯ ಓಡಿಶಾದ ಚಿಲ್ಕಾದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರ ತಂದೆ-ತಾಯಿಯಿಂದ ದಿನಸಿ ಕಿಟ್‍ಗಳನ್ನು ವಿತರಿಸುವಲ್ಲಿ ಕಾರಣರಾಗಿ, ಯೋಧನೋರ್ವರು ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.