ಬನಹಟ್ಟಿಯ ಸಿವಿಲ್ ನ್ಯಾಯಾಧೀಶೆ ಎಚ್.ಶ್ವೇತಾ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗವಾಣೆಗೊಂಡ  ಹಿನ್ನೆಲೆಯಲ್ಲಿ ಸ್ಥಳೀಯ ವಕೀಲರ ಸಂಘದ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟರು.
ವಕೀಲರು ನಿರಂತರ ಅಧ್ಯಯನ ಶೀಲರಾಗಿರಬೇಕು
ರಬಕವಿ-ಬನಹಟ್ಟಿ,ಮೇ18:ವಕೀಲರು ನಿರಂತರ ಅಧ್ಯಯನಶೀಲರಾದರೆ ನ್ಯಾಯಾಧೀಶರಿಗೂ ಮತ್ತು ಕಕ್ಷಿದಾರರಿಗೆ ಬಹಳಷ್ಟು ಸಹಾಯವಾಗುತ್ತದೆ. ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಥಳೀಯ ಕಿರಿಯ ಶ್ರೇಣಿಯ ಸಿವಿಲ್‍ಲ ನ್ಯಾಯಾಧೀಶೆ ಎಚ್.ಶ್ವೇತಾ ತಿಳಿಸಿದರು.
ಅವರು ಭಾನುವಾರ ಸ್ಥಳೀಯ ವಕೀಲರ ಸಂಘದ ಸದಸ್ಯರು ಹಮ್ಮಿಕೊಂಡು ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ಮಾತನಾಡಿ, ನ್ಯಾಯಾಂಗ ಇಲಾಖೆಯು ಪರಸ್ಪರ ಸಹಕಾರದಿಂದ ಕೂಡಿದೆ. ಇಲ್ಲಿ ನ್ಯಾಯಾಧೀಶರ ಮತ್ತು ವಕೀಲರ ಮಧ್ಯದಲ್ಲಿ ಪರಸ್ಪರ ಸಮನ್ವಯ ಮುಖ್ಯವಾಗಿದೆ. ಕಕ್ಷಿದಾರರಿಗೆ ನ್ಯಾಯವನ್ನು ಕೊಡಿಸುವುದೆ ನಮ್ಮ ಪ್ರಾಮಾಣಿಕ ಉದ್ದೇಶವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರಾದ ವಿಜಯ ಹೂಗಾರ, ಹರ್ಷವರ್ಧನ ಪಟವರ್ಧನ, ವೆಂಕಟೇಶ ನಿಂಗಸಾನಿ, ಎಸ್.ಎ.ಪಾಟೀಲ, ರವಿ ಸಂಪಗಾವಿ, ಮಹಾಂತೇಶ ಪದಮಗೊಂಡ,  ರಮೇಶ ಎಕ್ಸಂಬಿ, ಶ್ರೀಕಾಂತ ಕುಲಕರ್ಣಿ, ಭೀಮಶಿ ಯಲ್ಲಟ್ಟಿ ಇದ್ದರು. ಶಿವಕುಮಾರ ಷಣ್ಮುಖ ಕಾರ್ಯಕ್ರಮ ನಡೆಸಿಕೊಟ್ಟರು.