ತೇರದಾಳ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಡು ಬಡವರಿಗೆ ಮಾಶಾಸನ ವಿತರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಶಾಸನ ವಿತರಣೆ
ತೇರದಾಳ : ನಿರ್ಗತಿಕ ಬಡವರ ಸೇವೆಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಗುರಿಯಾಗಿದೆ. ಸೇವೆಯನ್ನು ಸ್ವಾರ್ಥ ರಹಿತ ಮಾಡುವುದು ಮತ್ತು ಅತ್ಯಂತ ಕಡುಬಡವರ ಹಿತ ಕಾಪಾಡುವುದು, ಅವರನ್ನು ಸಮಾಜದಲ್ಲಿ ಎಲ್ಲರಂತೆ ಕಾಣುವುದು ಧರ್ಮಸ್ಥಳದ ಪೂಜ್ಯರಾದ ವಿರೇಂದ್ರ ಹೆಗ್ಗಡೆಯವರ ಬಹು ಮುಖ್ಯ ಧ್ಯೇಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತೇರದಾಳ ವಲಯದ ಮೇಲ್ವಿಚಾರಕರಾದ ಸಂತೋಷ ಮಾಳಿ ಹೇಳಿದರು.
ಪಟ್ಟಣದ ಹಿರೇಮಠ ಗಲ್ಲಿಯಲ್ಲಿ ಯೋಜನೆ ವತಿಯಿಂದ ಅತ್ಯಂತ ಕಡುಬಡವರನ್ನು ಗುರುತಿಸಿ ಅವರಿಗೆ ಯೋಜನೆಯ ವತಿಯಿಂದ 750ರೂ.ಗಳನ್ನು ಮಾಶಾಸನ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪೋಲಿಸ್ ಠಾಣೆಯ ಎಎಸ್‍ಐ ಎಲ್.ಬಿ.ಮಾಳಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಟ್ಟಣದಲ್ಲಿನ ಕಡುಬಡವರನ್ನು ಗುರುತಿಸಿ ನೀಡಿರುವ ಈ ಮಾಶಾಸನ ಬಡವರ ಉಪಜೀವನಕ್ಕೆ ನೆರವಾಗಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಳ್ಳೊಳ್ಳೆಯ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಡವರ ಏಳ್ಗೆಗಾಗಿ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಯೋಜನೆಯ ನಗದು ಸಹಾಯಕರಾದ ಎಂ.ಎನ್. ದೇವೇಂದ್ರ, ಒಕ್ಕೂಟದ ಅಧ್ಯಕ್ಷರಾದ ಕಮಲವ್ವಾ ವಾಲಿ, ಸೇವಾ ಪ್ರತಿನಿಧಿಗಳಾದ ಗೀತಾ ಕಾಂಬಳೆ, ಶೋಭಾ ಖೇಮಲಾಪೂರ, ಸುವಿಧಾ ಸಹಾಯಕರು ಸೇರಿದಂತೆ ಇನ್ನಿತರರ ಇದ್ದರು.
Social Plugin