ನೆರವಿಗೆ ದಾವಿಸಿದ ಕೊಣ್ಣೂರ, ನಿರಾಣಿ
ಸ್ವಾಧೀನ ಕಳೆದುಕೊಂಡ ಕೈ, ಕಾಲು: ಚಿಕಿತ್ಸೆ ನೆರವು
*ಲಾಕ್‍ಡೌನ್ ಮಧ್ಯ ತುತ್ತು ಊಟಕ್ಕೂ ಪರಿತಪಿಸುತ್ತಿರುವ ಕುಟುಂಬ
ರಬಕವಿ-ಬನಹಟ್ಟಿ,ಮೇ22: ಬಡತನಲ್ಲಿ ಬೆಂದ ಬನಹಟ್ಟಿಯ ನೀರಿನ ಟಾಕಿ ನಿವಾಸಿ ಕಾಡಪ್ಪ ಅಂಬಿ ಕುಟುಂಬಕ್ಕೆ ಸ್ಪಂದಿಸಿದ ಯಲ್ಲಟ್ಟಿಯ ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೊ. ಬಸವರಾಜ ಕೊಣ್ಣೂರ ಹಾಗು ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿಯವರು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುವ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಿರುವದಕ್ಕೆ ಪತ್ರಿಕೆ ಅಭಿನಂದಿಸುತ್ತದೆ.
ಲಾಕ್‍ಡೌನ್‍ನಿಂದಾಗಿ ತುತ್ತು ಊಟಕ್ಕೂ ಸಮಸ್ಯೆ ಎದುರಾಗಿ ವಿಕಲಾಂಗಿ ಮಗುವಿನ ಆಸ್ಪತ್ರೆ ವೆಚ್ಚ ಗಗನಕುಸುಮವಾಗಿತ್ತು. ಇವೆಲ್ಲದಕ್ಕೂ ಸ್ಪಂದಿಸುವಲ್ಲಿ ಮುಂದಾದ ದಾನಿಗಳು ತಿಂಗಳಿಗೆ ಒಂದು ಸಾವಿರ ರೂ.ಗಳಂತೆ ಕೈ, ಕಾಲು ಸ್ವಾಧೀನ ಕಳೆದುಕೊಂಡಿರುವ ಮಗು ಆದಿತ್ಯನಿಗೆ ನೆರವಾಗುವಲ್ಲಿ ಕೊಣ್ಣೂರ ನೆರವಾದರೆ ಎಂಆರ್‍ಎನ್ ಫೌಂಡೇಶನ್ ಮೂಲಕ ಆರೋಗ್ಯ ಕಾರ್ಡ್ ಒದಗಿಸುವಲ್ಲಿ ಸಂಗಮೇಶ ನಿರಾಣಿ ನೆರವಾಗುವ ಮೂಲಕ ತೀವ್ರ ಸಂಕಷ್ಟದಲ್ಲಿನ ಕುಟುಂಬಕ್ಕೆ ಆಸರೆಯಾಗುವಲ್ಲಿ ಕಾರಣರಾಗಿದ್ದಾರೆ.