ರಬಕವಿಯಲ್ಲಿ ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಸಿದ್ದು ಸವದಿ.
ಅಂದು, ಇಂದು ಎಂದೆಂದೂ ನನ್ನ ಬೆಂಬಲ ಬಿಎಸ್‍ವೈ
ಕ್ಷೇತ್ರದ ಚರ್ಚೆಯ ಬಗ್ಗೆ ಸಭೆ ಸೇರಿದ್ದೇವು-ಸವದಿ
ಹಿರಿಯ ಶಾಸಕ ಉಮೇಶ ಕತ್ತಿಯವರ ನಿವಾಸದಲ್ಲಿ ಗುರುವಾರ ಔತಣಕೂಟಕ್ಕೆ ತೆರಳಿದ್ದೇವು. ಆದರೆ ರಾಜಕೀಯ ಚರ್ಚೆಗಳ್ಯಾವವೂ ನಡೆದಿಲ್ಲ. ಬದಲಾಗಿ ಆಯಾ ಕ್ಷೇತ್ರದ ಬಗ್ಗೆ ಕೊಂಚ ಅಸಮಾಧಾನ ಕಾರಣ ಸಮಸ್ಯೆಗಳನ್ನು ಹೇಳಿಕೊಂಡಿದ್ಧೇವಷ್ಟೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಶನಿವಾರ ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ರಬಕವಿಯ ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಂದು ಇಂದು ಎಂದೆಂದೂ ಬಿಎಸ್‍ವೈ ನಮ್ಮ ನಾಯಕರೇ. ಕೊರೊನಾ ಸಂದರ್ಭ ನೇಕಾರರಿಗೆ ಸಿದ್ಧಪಡಿಸಿದ ನೇಕಾರ ಸಮ್ಮಾನ ಯೋಜನೆಯನ್ನು ರೈತರಂತೆ ಪ್ರತಿ ವರ್ಷಕ್ಕೊಮ್ಮೆ 2 ಸಾವಿರ ರೂ.ಗಳನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಬಹುತೇಕ ಶ್ರಮಿಕ ವರ್ಗಕ್ಕೆ 5 ಸಾವಿರ ರೂ.ಗಳನ್ನು ಈ ಸಂದರ್ಭ ಒದಗಿಸಿದೆ. ಆ ಯೋಜನೆಯನ್ನಾದರೂ ನೇಕಾರ ಸಮುದಾಯಕ್ಕೆ ತರುವಂತಾಗಬೇಕು. ಹೀಗೆ ಹಲವಾರು ಚರ್ಚೆಗಳು ನಡೆದಿವೆಯೆಂದು ಬೇಸರದಿಂದ ಹೇಳಿದರು.
ಇದೇ ಸಂದರ್ಭ ಸರದಿಯಲ್ಲಿ ನಿಂತಿದ್ದ ಸಾವಿರಾರು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು. ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಮಹಾದೇವ ಕೋಟ್ಯಾಳ, ಆನಂದ ಕಂಪು ಸೇರಿದಂತೆ ಅನೇಕರಿದ್ದರು.
ಚೀಟಿ ತರದಿದ್ದರೆ ಕಿಟ್ ನೀಡೊಲ್ಲ: ಕೆಲ ಸಮುದಾಯ ಹಾಗು ವಿಪಕ್ಷ ನಾಯಕರಿಂದ ವ್ಯಾಪಕ ವಿರೋಧವಾಗಿದ್ದ ಬಿಜೆಪಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ವಿತರಿಸುತ್ತಿರುವ ದಿನಸಿ ಕಿಟ್ ಸಂದರ್ಭ ಬಿಜೆಪಿ ಪಕ್ಷದ ಭಾವಚಿತ್ರ ಹೊಂದಿದ ಚೀಟಿ ತಯಾರಿಸಿ ವಿವರ ಬಗ್ಗೆ ಬರೆದು ವಾಪಸ್ ನೀಡಿದರೆ ಮಾತ್ರ ದಿನಸಿ ಕಿಟ್ ವಿತರಿಸುವ ವ್ಯವಸ್ಥೆ ನಡೆದಿತ್ತು. ಇದಕ್ಕೆ ಕ್ಯಾರೇ ಎನ್ನದ ಶಾಸಕ ಸವದಿ, ನೀಡಿದ ಚೀಟಿಯನ್ನು ತುಂಬಿ ವಾಪಸ್ ನೀಡದಿದ್ದಲ್ಲಿ ದಿನಸಿ ಕಿಟ್ ನೀಡೋಲ್ಲವೆಂದು ಖಡಕ್ ಸಂದೇಶ ನೀಡಿದರು.
- FOR ADVERTISEMENT CONTACT - 9902523698

Social Plugin