ರಬಕವಿಯ ಐರ್ಶರ್ಯಾ ಟೆಕ್ಸ್‍ಟೈಲ್ಸ್‍ನ ಮಾಲಿಕ ಸತೀಶ ಹಜಾರೆಯವರ ಗಾರ್ಮೆಂಟ್ಸ್‍ನಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುತ್ತಿರುವದು.
ಬಾಗಲಕೋಟೆ ಜಿಲ್ಲೆಯಲ್ಲಿಯೇ ಪ್ರಥಮ ಪಿಪಿಇ ಕಿಟ್ ತಯಾರಿಕೆ
*ಮಹಿಳಾ ಪ್ರಧಾನ ಉದ್ಯೋಗಕ್ಕೆ ಸಹಾಯವಾದ ಗಾರ್ಮೆಂಟ್ಸ್
ವರದಿ - ಚಂದ್ರಶೇಖರ ತುಂಗಳ
ರಬಕವಿ-ಬನಹಟ್ಟಿ
ಗಾರ್ಮೆಂಟ್ಸ್ ಉದ್ಯೋಗಕ್ಕೆ ಹೆಸರಾಗಿದ್ದ ಬೆಂಗಳೂರಿನಂತೆ ಇದೀಗ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ನೇಕಾರಿಕೆಯೊಂದಿಗೆ ಗಾರ್ಮೆಂಟ್ಸ್‍ಗೆ ಹೆಚ್ಚಿನ ಒಲವು ತೋರುತ್ತಿರುವದು ಮತ್ತೊಂದು ಹೆಜ್ಜೆಗೆ ಕಾರಣವಾಗಿದೆ.
ಕೊರೊನಾ ವೈರಸ್ ಲಾಕ್‍ಡೌನ್ ನಿಯಮಾವಳಿಗಳಲ್ಲಿ ಕೇಂದ್ರ ಸರ್ಕಾರ ಆರ್ಥಿಕತೆ ಉತ್ತೇಜನಕ್ಕಾಗಿ ಕೆಲವೊಂದು ನಿಯಮಗಳನ್ನು ಸಡಿಲಗೊಳಸಿದ್ದು, ಮಹಿಳಾ ಪ್ರಧಾನ ಉದ್ಯೋಗವಾಗಿರುವ ಗಾರ್ಮೆಂಟ್ಸ್ ಕಳೆದೊಂದು ವಾರದಿಂದ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಿ ಗಾರ್ಮೆಂಟ್ಸ್ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಅಂತೆಯೇ ಗಾರ್ಮೆಂಟ್ಸ್‍ಗಳಲ್ಲಿ ಸ್ಯಾನಿಟೈಸರ್ಸ್‍ಗಳ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್‍ಗಳನ್ನು ಕಡ್ಡಾಯ ಮಾಡಲಾಗಿದೆ ಎಂದು ಐಶ್ವರ್ಯ ಟೆಕ್ಸ್‍ಟೈಲ್ಸ್‍ನ ಮಾಲಿಕ ಸತೀಶ ಹಜಾರೆ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರು ನಾನು ಟೈಲರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಗಾರ್ಮೆಂಟ್ಸ್‍ನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ಸ್‍ಗಳ ಬಳಕೆ ಕಡ್ಡಾಯ ಮಾಡಲಾಗಿದೆ.
ಅನನುಭವಿಗಳಿಗೆ ಸಹಾಯ: ಉದ್ಯೋಗ ಸೃಷ್ಟಿಗೆ ರಬಕವಿಯ ಸತೀಷ ಹಜಾರೆ ಹಾಗು ಬನಹಟ್ಟಿಯ ಚಂದ್ರಶೇಖರ ಪಾಸ್ತೆಯವರು ಅನನುಭವಿ ಮಹಿಳೆಯರಿಗೆ ಸ್ವತಃ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಸಹಕಾರಿಯಾಗುತ್ತಿದ್ದಾರೆ.
ಪಿಪಿಇ ಕಿಟ್: ಬಾಗಲಕೋಟೆ, ವಿಜಯಪುರ ಹಾಗು ಬೆಳಗಾವಿ ಜಿಲ್ಲೆಗಳ ಆಸ್ಪತ್ರೆ ವೈದ್ಯರಿಗೆ ಸೇರಿದಂತೆ ಅಗತ್ಯವಿರುವಲ್ಲಿ ಸಾವಿರಕ್ಕೂ ಅಧಿಕ ಪಿಪಿಇ ಕಿಟ್‍ಗಳನ್ನು ಅಗ್ಗದ ದರವಾದ ಕೇವಲ 500 ರಿಂದ 600 ರೂ.ಗಳಿಗೆ ಒದಗಿಸುತ್ತಿರುವದು ವಿಶೇಷ. ಅಲ್ಲದೆ ಕೊರೊನಾ ವೈರಸ್‍ಗೆ ಸಂಬಂಧ ಮಾಸ್ಕ್ ತಯಾರಿಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಮಾರಕ ರೋಗದ ವಿರುದ್ಧ ಹೋರಾಡುವಲ್ಲಿ ಗಾರ್ಮೆಂಟ್ಸ್‍ಗಳ ಪಾತ್ರ ಹಿರಿದು.
ನೂರಾರು ಕುಟುಂಬಗಳಿಗೆ ಆಸರೆ: ನೇಕಾರಿಕೆಯೊಂದಿಗೆ ಇದೀಗ ಗಾರ್ಮೆಂಟ್ಸ್‍ನತ್ತ ಮುಖ ಮಾಡಿರುವ ಕೆಲ ಉದ್ಯಮಿಗಳಿಂದ ನೂರಾರು ಮಹಿಳಾ ಪ್ರಧಾನ ಕುಟುಂಬಗಳಿಗೆ ಸಂಜೀವಿನಿಯಂತೆ ಆಸರೆಯಾಗುತ್ತಿವೆ. ತಿಂಗಳಿಗೆ 5 ರಿಂದ 9 ಸಾವಿರ ರೂ.ಗಳವರೆಗೂ ದುಡಿಮೆಯ ವೇತನ ಪಡೆಯಬಹುದಾಗಿದ್ದು, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗುವಲ್ಲಿ ಗಾರ್ಮೆಂಟ್ಸ್ ಸಹಕಾರಿಯಾಗುತ್ತಿದೆ.
- FOR ADVERTISEMENT CONTACT - -9902523698

Social Plugin