ಈ ಮೇಲಿನ ವಿಡಿಯೋ ಸಂಪೂರ್ಣ ತಪ್ಪದೇ ವೀಕ್ಷಿಸಿ....
ವರದಿ : ಪ್ರಭು ಜೈನರ
ಸಾರ್ವಜನಿಕರಿಗೆ ದಾಖಲೆ ಕೇಳುವ ಹಕ್ಕಿಲ್ಲವೇ.......ಶಂಕರ ಕುಂಬಾರ
ತೇರದಾಳ: ಪಟ್ಟಣದಲ್ಲಿ ಇಂದು ಕುಂಬಾರ ಸಮಾಜದ ಮತ್ತು ಬಿಜೆಪಿಯ ಯುವ ಮುಖಂಡರಾದ ಶಂಕರ ಕುಂಬಾರ ಮತ್ತು ಸದಾಶಿವ ಹೊಸಮನಿ ಹಾಗೂ ಪುರಸಭೆಯ ಸದಸ್ಯರಾದ ಸಚೀನ ಕೊಡತೆ, ಲಕ್ಷ್ಮಣ ನಾಯಕ, ಕುಮಾರ ಸರಿಕರ, ಸಂತೋಷ ಜಮಖಂಡಿ, ಕೇದಾರಿ ಪಾಟೀಲ ಹಾಗೂ ಮೌಲಾಲಿ ಚತ್ರಭಾನುಕೋಟಿ ಇವರ ಹಾಗೂ ಪುರಸಭೆಯ ಕಿರಿಯ ಅಭಿಯಂತರಾದ ಯಲ್ಲಪ್ಪ ಜೋಗಿ ಇವರುಗಳ ಮಧ್ಯ ಸೋಮವಾರ ದಿನಾಂಕ 25/05/2020 ರಂದು ಸಾಯಂಕಾಲ ಸುಮಾರು 6.00 ಗಂಟೆಗೆ ತೇರದಾಳ ಪುರಸಭೆಯ ಕಚೇರಿಯಲ್ಲಿ ಬಿರುಸಿನ ಮಾತಿನ ಚಕಮಕಿ ನಡೆಯಿತು.
ಘಟನೆಯ ವಿವರ: ತೇರದಾಳ ಪಟ್ಟಣದಲ್ಲಿ ಸಾಮಾಜಿಕ ಸೇವೆಯಲ್ಲಿ ವಿಶೇಷವಾಗಿ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಕುಂಬಾರ ಸಮಾಜದ ಯುವ ಮುಖಂಡರು ಹಾಗೂ ಬಿಜೆಪಿಯ ಯುವ ಧುರೀಣರಾದ ಶಂಕರ ಕುಂಬಾರ ಇವರು ಶೌಚಾಲಯಕ್ಕೆ ಸಂಬಂಧಪಟ್ಟಂತೆ ದಾಖಲೆ ಕೇಳಿದ್ದಕ್ಕಾಗಿ ಪುರಸಭೆಯ ಕಿರಿಯ ಅಭಿಯಂತರರಾದ ಯಲ್ಲಪ್ಪ ಜೋಗಿಯವರು ಬೇಜವಾಬ್ದಾರಿ ಉತ್ತರ ನೀಡಿ ಅಲ್ಲಿಯೇ ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಅಳಿಯನಿಗೆ ನಾನು ಕೇಳಿದ ದಾಖಲೆಯನ್ನು ಕೊಡಬೇಡವೆಂದು ಉದ್ದಟತನದಿಂದ ಅವನಿಗೆ ತಿಳಿಸಿ ನನಗೆ ಅವಮಾನ ಮಾಡಿದರೆಂದು ಕುಂಬಾರವರು ಜೋಗಿಯವರ ಮೇಲೆ ನೇರವಾಗಿ ಆರೋಪ ಮಾಡಿದರು. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಅಧಿಕಾರಿಯು ಮೊದಲಿನಿಂದಲೂ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ, ಯಾರೇ ಬಂದರೂ ಸಹ ಬೇಜವಾಬ್ದಾರಿ ಉತ್ತರ ಕೊಟ್ಟು ತನಗೆ ಬೇಕಾದವರಿಗೆ ಕೇಳಿದ್ದನ್ನು ಕೊಡುತ್ತಾರೆ ಎಂದು ಆರೋಪಿಸಿದರು. ನಂತರ ಪುರಸಭೆಯ ಸದಸ್ಯರಾದ ಸಚೀನ ಕೊಡತೆ ಮಾತನಾಡಿ ನಾನು ಸಹ ಮೊದಲಿನಿಂದಲೂ ಇವರ ವರ್ತನೆ ಕುರಿತು ಸಾರ್ವಜನಿಕರಿಂದ ಕೇಳಿಪಟ್ಟಿದ್ದೇನೆ ಅಲ್ಲದೇ ನನಗೂ ಸಹ ಇದರ ಅನುಭವವಾಗಿದೆ. ಸದಸ್ಯರಾದರೂ ಸಹ ನಮಗೆ ಇವರಿಂದ ಕವಡೆ ಕಾಸಿನ ಕಿಮ್ಮತ್ತಿಲ್ಲ, ನಮ್ಮ ಪರಿಸ್ಥಿತಿಯೇ ಹೀಗಾದರೆ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದರು.
ಪುರಸಭೆಯಲ್ಲಿ ಇನ್ನೂವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆಗದ ಕಾರಣ ಇಲ್ಲಿ ಎಲ್ಲವೂ ಅಧಿಕಾರಿಗಳು ಹೇಳಿದಂತೆ ನಡೆಯುತ್ತಲಿದೆ. ಜನ ಪ್ರತಿನಿಧಿಗಳಾಗಿ ಆಯ್ಕೆಯಾದ ನಾವು ಹೆಸರಿಗಷ್ಟೆ ಪುರಸಭೆಯ ಸದಸ್ಯರಾಗಿದ್ದೇವೆ ಹೊರತು ಇಂತಹ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯ ಮಾಡುವುದು ಅಸಾಧ್ಯವಾಗಿದೆ. ಇಂತಹ ಅಧಿಕಾರಿಗಳಿದ್ದರೇ ಸಾರ್ವಜನಿಕವಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯುದಿಲ್ಲ. ಸಾರ್ವಜನಿಕವಾಗಿ ಸೇವೆ ಮಾಡುವುದನ್ನು ಬಿಟ್ಟು ಸ್ವಹಿತಕ್ಕಾಗಿ ಸೇವೆ ಮಾಡುವ ಇಂತಹ ಅಧಿಕಾರಿಗಳಿಂದ ಪಟ್ಟಣದ ಅಭಿವೃದ್ಧಿ ಸಾಧ್ಯವೇ ಎಂದು ತಮ್ಮ ನೋವನ್ನು ತೋಡಿಕೊಂಡರು. ಜನರಿಂದ ಆಯ್ಕೆಯಾದ ನಾವುಗಳು ಜನರ ಪ್ರಶ್ನೆಗೆ ಉತ್ತರ ನೀಡದಂತಾಗಿದ್ದೇವೆ, ಹೀಗಾಗಿ ಜನರ ಸಮಸ್ಯೆಗಳು ಹಾಗೇ ಉಳಿದಿವೆ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೆ ಕ್ರಮಕೈಕೊಂಡು ಸಾರ್ವಜನಿಕರಿಗಾಗುವ ತೊಂದರೆಯನ್ನು ನಿವಾರಿಸಬೇಕೆಂದು ಪುರಸಭೆಯ ಸದಸ್ಯರು ಹಾಗೂ ಸಾರ್ವಜನಿಕರು ಅಧಿಕಾರಿಗಳಗೆ ಈ ಮೂಲಕ ಒತ್ತಾಯಿಸಿದ್ದಾರೆ.
ಜೆ.ಈಯವರ ಹೆಳಿಕೆ: ಈ ಘಟನೆ ಕುರಿತು ಸಂಬಂಧಸಿದ ಜೆಈಯವರಾದ ಜೋಗಿಯವರನ್ನು ಪ್ರಶ್ನಿಸಿದಾಗ ಈ ಬಗ್ಗೆ ನಾನು ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ, ನಾಳೆ ನನ್ನ ಹೇಳಿಕೆಯನ್ನು ಮುಖ್ಯಾಧಿಕಾರಿಗಳ ಸಮಕ್ಷಮ ನಿಮಗೆ ತಿಳಿಸುತ್ತೇನೆ ಎಂದು ಹೇಳಿದರು.
ಮುಖ್ಯಾಧಿಕಾರಿಗಳ ಹೇಳಿಕೆ: ಈ ಘಟನೆ ಕುರಿತು ಮಾಧ್ಯಮದವರು ಫೋನ ಮುಖಾಂತರ ಸಂರ್ಕಿಸಿದಾಗ ಸಂಬಂದಪಟ್ಟ ವಿಷಯದ ಬಗ್ಗೆ ನಾಳೆ ಬಂದು ಚರ್ಚಿಸಿ ತಮಗೆ ವಿವರ ನೀಡುವುದಾಗಿ ತಿಳಿಸಿದರು.
ಜಾಹೀರಾತು

Social Plugin