ಬಾಗಲಕೋಟೆ-ಕುಡಚಿ ರೈಲು ಮಾರ್ಗ
ಬರುವ ಸಂಪುಟದಲ್ಲಿ ಎಲ್ಲವೂ ಸುರಳಿತ- ಗದ್ದಿಗೌಡರ
ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಂಡಿದೆ
ರಬಕವಿ-ಬನಹಟ್ಟಿ,ಮೇ25: ದಶಕಗಳ ಕನಸಾಗಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಇದೀಗ ಕೆಳಹಂತದ ಕಾರ್ಯಗಳು ನಡೆಯುತ್ತಿರುವ ಹಿನ್ನಲೆ ಬಹುತೇಕ ಎಲ್ಲ ಕಂಟಕಗಳು ನಿವಾರಣೆಯಾಗುವ ಮೂಲಕ ಈ ಭಾಗದ ಜನತೆಗೆ ಹೊಸ ಆಶಾಕಿರಣ ಮೂಡಿಸುವಲ್ಲಿ ಕಾರಣವಾಗಿದೆ.
ಬಾಗಲಕೋಟೆಯಿಂದ ಕಜ್ಜಿಡೋಣಿವರೆಗೆ 30 ಕಿ.ಮೀ.ನಷ್ಟು ಕಾಮಗಾರಿ ಸಂಪೂರ್ಣಗೊಂಡಿದೆ. ನಂತರದ ಪ್ರದೇಶದಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧ ವಿಳಂಬ ನೀತಿ ಎದುರಾಗಿತ್ತು. ಈ ಕುರಿತು ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ ಖಜ್ಜಿಡೋಣಿಯಿಂದ ಕುಡಚಿವರೆಗಿನ ಎಲ್ಲ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸದ್ಯದಲ್ಲಿಯೇ ಎಲ್ಲವೂ ಸ್ಪಷ್ಟವಾಗಬೇಕಿತ್ತು ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಕಾರಣ ಅಧಿಕಾರಿಗಳು ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವದರಿಂದ ಕೊಂಚ ತಡವಾಗಿದೆ ಎಂದರು.
ಈಗಾಗಲೇ 141 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಸಂಬಂಧ 30 ಕಿ.ಮೀ. ಮುಕ್ತಾಯಗೊಂಡಿದೆ. ಇನ್ನುಳಿದ 108 ಕಿ.ಮೀ.ನ ಕಾಮಗಾರಿಗೆ ಬರುವ ಕೇಂದ್ರ ಸಂಪುಟ ಸಭೆಯಲ್ಲಿ ಟೆಂಡರ್ ಕರೆಯುವ ಮೂಲಕ ಎಲ್ಲ ಪ್ರಕ್ರಿಯೆಗಳು ನಡೆಯಲಿವೆ ಎಂದು ಸಂಸದರು ತಿಳಿಸಿದರು.
ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಮಾತನಾಡಿ. ಭೂಸ್ವಾಧೀನಕ್ಕೆ ಸಂಬಂಧ 26 ಗ್ರಾಮಗಳಲ್ಲಿ ಸಭೆ ನಡೆಸಲಾಗಿದ್ದು, ಒಂದು ಗ್ರಾಮ ಹೊರತುಪಡಿಸಿ ಎಲ್ಲೆಡೆ ಭೂಸ್ವಾಧೀನ ಕ್ರಿಯೆ ಮುಕ್ತಾಯಗೊಂಡಿದೆ. 11 ಗ್ರಾಮಗಳಿಗೆ ಕೇಂದ್ರದಿಂದ 19(1) ಪ್ರತಿ ನೀಡಿದೆ. ಒಟ್ಟಾರೆ 848 ಎಕರೆಯಷ್ಟು ಭೂಮಿಗೆ ಸಕಲ ರೀತಿಯ ಪರಿಹಾರವೂ ಒದಗಿಸಲಾಗುತ್ತಿದೆ. ಕಲಹಳ್ಳಿ ಹಾಗು ಜಾಲಿಬೇರಿ ಗ್ರಾಮದಲ್ಲಿನ ಅರಣ್ಯ ಪ್ರದೇಶಕ್ಕೆ ಸಂಬಂಧದ ಸಮಸ್ಯೆಯನ್ನೂ ಪರಿಹರಿಸಲಾಗಿದೆ ಎಂದು ತಿಳಿಸಿದರು.
ಜಾಹೀರಾತು

Social Plugin