ಸಂಕಷ್ಟ ನೇಕಾರ ಕುಟುಂಬಗಳಿಗೆ ಆಸರೆಯಾದ ಮಾಲಿಕರು
ರಬಕವಿ-ಬನಹಟ್ಟಿ,ಮೇ11: ಕೊರೊನಾದ ಲಾಕ್‍ಡೌನ್ ಸಂದರ್ಭ ನೇಕಾರರಿಗೆ ಉದ್ಯೋಗವಿಲ್ಲದೆ ತೀವ್ರ ಸಂಕಷ್ಟದ ಜೀವನ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧ ಪಾವರ್‍ಲೂಮ್ ಮಾಲಿಕರ ಸಂಘವು 500 ಕ್ಕೂ ಅಧಿಕ ನೇಕಾರ ಕುಟುಂಬಗಳಿಗೆ ದಿನಸಿ ಪೊಟ್ಟಣ ವಿತರಣೆ ಮಾಡುವಲ್ಲಿ ಕಾಳಜಿ ವಹಿಸಿದ್ದಕ್ಕೆ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಧನ್ಯತೆ ಹೇಳಿದರು.
ಬನಹಟ್ಟಿಯ ಭದ್ರನ್ನವರ ಸಮುದಯ ಭವನದಲ್ಲಿ ಪಾವರ್‍ಲೂಮ್ ಮಾಲಿಕರ ಸಂಘದಿಂದ ನಡೆದ ದಿನಸಿ ಪೊಟ್ಟಣ ಕಾರ್ಯದಲ್ಲಿ ತೊಡಗಿ ಮಾತನಾಡಿದ ಅವರು, ಈಗಾಗಲೇ ಹಲವಾರು ಜನರು ಬಹುತೇಕ ಸಂಕಷ್ಟದ ನೇಕಾರ ಸಮುದಾಯದ ಸಹಾಯಕ್ಕೆ ಮುಂದಾಗಿದ್ದಾರೆ. ಮುಂದೆ ಮತ್ತೆ ಸಮಸ್ಯೆ ಎದುರಾದಲ್ಲಿ ಮತ್ತಷ್ಟು ಸಹಾಯ ಮಾಡುವದಾಗಿ ಸಂಘವು ಸ್ಪಷ್ಟನೆ ನೀಡಿತು.
ಮಾಲಿಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ ಮಾತನಾಡಿ, ನೇಕಾರರ ಸಂಕಷ್ಟದ ದಿನಗಳಲ್ಲಿ ಸದಾ ಟೊಂಕಕಟ್ಟಿ ನಿಂತು ಸಮಸ್ಯೆ ನೀಗಿಸುವಲ್ಲಿ ಮಾಲಿಕರು ಯಶಸ್ವಿ ಕಂಡಿದ್ದೇವೆ. ಸದ್ಯ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿಯೂ ಎಲ್ಲರೂ ಬೆಂಗಾವಲಾಗಿ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಮಿತಿ ಯಶಸ್ವಿಯಿದೆ ಎಂದು ಮಲ್ಲಿಕಾರ್ಜುನ ಕಕಮರಿ ತಿಳಿಸಿದರು.
ನೇಕಾರ ಸಮ್ಮಾನ ಯೋಜನೆ ಪಡೆಯಿರಿ: ಪ್ರತಿಯೊಬ್ಬ ನೇಕಾರನಿಗೂ ರಾಜ್ಯ ಸರ್ಕಾರದ ನೇಕಾರ ಸಮ್ಮಾನ ಯೋಜನೆಯಡಿ ಪ್ರತಿ ವರ್ಷ 2 ಸಾವಿರ ರೂ.ಗಳನ್ನು ಒದಗಿಸುವದಕ್ಕೆ ಸಂಬಂಧ ಮಲ್ಲಿಕಾರ್ಜುನ ಬಾಣಕಾರ ಸ್ಪಷ್ಟನೆ ನೀಡಿ, ಆಧಾರ್, ಪಡಿತರ ಚೀಟಿ, ಬ್ಯಾಂಕ್ ಖಾತೆಯನ್ನು ಮಾಲಿಕರಿಗೆ ಒದಗಿಸಿದ್ದಲ್ಲಿ, ಮಾಲಿಕರಿಂದ ನೇಕಾರನೆಂದು ಖಚಿತಪಡಿಸಿಕೊಂಡು ಸರ್ಕಾರಕ್ಕೆ ಒದಿಗಿಸಿದ್ದಲ್ಲಿ ಯೋಜನೆ ನೇಕಾರರಿಗೆ ಪ್ರಾಮಾಣಿಕವಾಗಿ ಉಪಯೋಗವಾಗಲಿದೆ ಎಂದರು.