- ಬನಹಟ್ಟಿ ಬಸ್ ನಿಲ್ದಾಣ ಪಕ್ಕದ ಲಕ್ಷ್ಮೀ ನಗರಕ್ಕೆ ತೆರಳುವ ರಸ್ತೆಯನ್ನು ಕಬ್ಬಿಣದ ಬ್ಯಾರಿಕೇಡ್‍ನಿಂದ ಸಂಪೂರ್ಣ ಮುಚ್ಚಲ್ಪಟ್ಟಿರುವದು.
ಸ್ವಯಂಪ್ರೇರಿತ ಸೀಲ್‍ಡೌನ್ ಮಾಡಿಕೊಂಡ ಜನತೆ
ರಬಕವಿ-ಬನಹಟ್ಟಿ,ಮೇ11: ರಬಕವಿ-ಬನಹಟ್ಟಿ ತಾಲೂಕಿಗೆ ಮೊದಲ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನಲೆ ಪಟ್ಟಣದ ಲಕ್ಷ್ಮೀ ನಗರ ನಿವಾಸಿಗಳು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ರಸ್ತೆಗಳನ್ನು ಸೀಲ್‍ಡೌನ್ ಮಾಡಿಕೊಂಡ ಪ್ರಸಂಗ ನಡೆಯಿತು.
ಕಳೆದ ಮೂರ್ನಾಲ್ಕು ದಿನಗಳಿಂದ ಲಾಕ್‍ಡೌನ್‍ಗೆ ಸಂಬಂಧ ಸ್ವಲ್ಪ ನಿರಾಳತೆಯೊಂದಿಗೆ ಕಿರಾಣಿ, ಔಷಧಿ ಸೇರಿದಂತೆ ಹಲವಾರು ಅಂಗಡಿಗಳನ್ನು ತೆರೆಯುವಂತೆ ಅವಕಾಶ ನೀಡಿತ್ತು. ಸದ್ಯ ಕ್ವಾರಂಟೈನ್‍ನಲ್ಲಿರುವ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಸುತ್ತಲಿನ ಪ್ರದೇಶದ ಜನತೆ ಸ್ವಯಂಪ್ರೇರಿತವಾಗಿ ಮನೆಯಿಂದ ಹೊರಬಾರದೆ ಸುರಕ್ಷತೆಗೆ ಒತ್ತು ನೀಡುತ್ತಿದ್ದು, ಅಲ್ಲಲ್ಲಿ ಬ್ಯಾರಿಕೇಡ್, ಕಟ್ಟಿಗೆ ಹಾಗು ಬ್ಯಾರಲ್‍ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.

Social Plugin