ದಯವಿಟ್ಟು ನಮ್ಮನ್ನು ಮನೆಗೆ ಕಳುಹಿಸಿ....


ತೇರದಾಳ:ಕೊರೋನಾ ಕೊವಿಡ್-19 ಕಾರಣದಿಂದ ಹೊರರಾಜ್ಯ ಮಹಾರಾಷ್ಟ್ರದಿಂದ ಪಟ್ಟಣಕ್ಕೆ ಬಂದ ಸುಮಾರು ಎಪ್ಪತ್ತು ಜನರನ್ನು ತೇರದಾಳ ಪಟ್ಟಣದ ಗುರುಕುಲ ಸಂಸ್ಥೆಯ ಮಂಗಲಕಾರ್ಯಾಲಯದಲ್ಲಿ  ತಾಲ್ಲೂಕಾಡಳಿತವು ಮಂಗಳವಾರ ದಿನಾಂಕ 12/05/2020 ರಂದು ಸಾಂಸ್ಥಿಕ ಕ್ವಾರಂಟೈನ ಮಾಡಲಾಗಿತ್ತು, ಆದರೆ ಈಗ ಕ್ವಾರಂಟೈನ ಅವಧಿ ಮುಗಿದು ಸುಮಾರು ಆರು ದಿನಗಳಾಗಿವೆ ಆದರೂ ಇವರಿಗೆ ಕ್ವಾರಂಟೈನ ಕೇಂದ್ರದಿಂದ ಮನೆಗೆ ಹೋಗಲು ಮುಕ್ತಿ ಸಿಕ್ಕಿಲ್ಲ ಎಂದು ಕ್ವಾರಂಟೈನಗೊಳಗಾದವರು ಪೋನ ಮುಖಾಂತರ ಮಾಧ್ಯಮಕ್ಕೆ ತಮ್ಮ ಅಳಲನ್ನು ತೊಡಿಕೊಂಡರು. ಇಲ್ಲಿರುವ ನಾವುಗಳು ವಯೋವೃದ್ಧರು, ಚಿಕ್ಕಮಕ್ಕಳು ಇದ್ದು, ಚಿಕ್ಕಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ಡು ಮುಂತಾದ ಸೌಲಭ್ಯಗಳು ಸಿಗದೆ ಮಕ್ಕಳು ಕಿರಿಕಿರಿ ಮಾಡುತ್ತಿದ್ದು ಹೀಗಾಗಿ ಮಕ್ಕಳನ್ನು ಸಂತೈಸಲು ತುಂಬಾ ತೊಂದರೆಯಾಗುತ್ತಲಿದೆ. ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ದಯವಿಟ್ಟು ನಮ್ಮನ್ನು ನಮ್ಮ ಮನೆಗೆ ಕಳುಹಿಸಿ ಪುಣ್ಯಕಟ್ಟಿಕೊಳ್ಳಬೇಕೆಂದು ಬೇಡಿಕೊಂಡರು. ಈ ಕುರಿತು ತಾಲೂಕಾ ತಹಶೀಲದಾರರಾದ ಪ್ರಶಾಂತ ಚನಗೊಂಡರವರನ್ನು ಪೋನ ಮುಖಾಂತರ ಸಂಪರ್ಕಿಸಿ ಈ ಬಗ್ಗೆ ಪ್ರಶ್ನಿಸಿದಾಗ, ನಮಗೂ ಕೂಡ ಅವರ ಬಗ್ಗೆ ಅನುಕಂಪವಿದೆ ನಾವೇನು ಅವರನ್ನು ಉದ್ದೇಶಪೂರ್ವಕವಾಗಿ ಅಲ್ಲಿ ಇಟ್ಟಿರುವುದಿಲ್ಲ ಅವರ ರಕ್ಷಣೆಗಾಗಿಯೇ ಸರಕಾರದ ನಿರ್ದೇಶನದ ಮೇರೆಗೆ ಈ ಕ್ರಮ ಕೈಕೊಳ್ಳಲಾಗಿದೆ. ಈಗಾಗಲೆ ಅವರೆಲ್ಲರ ಗಂಟಲು ದ್ರವವನ್ನು ತಾಲೂಕಾ ಆರೋಗ್ಯದ ನೆರವಿನಿಂದ ಪಡೆದು ಪರೀಕ್ಷೆಗೆ ಕಳುಹಿಸಿಕೊಟ್ಟು ಸುಮಾರು ದಿನಗಳು ಗತಿಸಿವೆ. ಈಗಾಗಲೇ ಅವರ ವರದಿ ಬರಬೆಕಾಗಿತ್ತು ಆದರೆ ರಾಜ್ಯದಲ್ಲಿ ಕ್ವಾರಂಟೈನಗೊಳಗಾದವರ ಸಂಖ್ಯೆ ಹೆಚ್ಚಾಗಿದ್ದು ಹಾಗಾಗಿ ಲ್ಯಾಬದಿಂದ ವರದಿ ಬರುವುದು ವಿಳಂಬವಾಗಿದೆ. ಆದರೆ ಇಂದು ಅಥವಾ ನಾಳೆ ವರದಿ ಬರುವ ನಿರಿಕ್ಷೆಯಿದೆ ಎಂದು ಹೇಳಿದರು. ಕಾರಣ ವರದಿ ಬಂದ ತಕ್ಷಣವೆ ಅವರನ್ನು ಕ್ವಾರಂಟೈನ ಕೇಂದ್ರದಿಂದ ಬಿಡುಗಡೆ ಮಾಡಲಾಗುವುದು. ಆದ್ದರಿಂದ ಕ್ವಾರಂಟೈನಗೊಳಗಾದವರು ಯಾವುದೇ ಕಾರಣಕ್ಕೂ ಆತಂಕ ಪಡದೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು. ಈ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿಯಾದ ಡಾ: ಜಿ.ಎಸ್ ಗಲಗಲಿಯವರನ್ನೂ ಸಹ ಸಂಪರ್ಕಿಸಿದಾಗ ಅವರು ಕೂಡಾ ಇದೆ ಉತ್ತರವನ್ನು ನೀಡಿದರು.        


- FOR ADVERTISEMENT CONTACT - 
                 9902523698