ಮದ್ಯಪ್ರೀಯರಿಗೆ ಹಬ್ಬದ ವಾತಾವರಣ
ತೇರದಾಳ: ಕೋವಿಡ್-19ನಿಂದಾಗಿ ಸುಮಾರು 40 ದಿನಗಳ ಕಾಲ ಲಾಕಡೌನದಿಂದಾಗಿ ಮದ್ಯಪ್ರೀಯರಿಗೆ ಮದ್ಯ ಸಿಗದೇ ದೇಶದಲ್ಲಿ ಎಷ್ಟೋ ಜನ ವಿಲವಿಲ ಒದ್ದಾಡಿದ್ದಾರೆ ಎಷ್ಟೋ ಜನ ಸ್ಯಾನಿಟೈಜರ ಕುಡಿದಿದ್ದಾರೆ ಕೆಲವರು ಹತಾಶರಾಗಿ ಆತ್ಮಹತ್ಯೆಯನ್ನೂ ಸಹ ಮಾಡಿಕೊಂಡಿದ್ದಾರೆ, ಆದರೆ ಇಂದು ದಿನಾಂಕ 4/5/2020 ರಂದು ರಾಜ್ಯ ಸರ್ಕಾರ ಆದೇಶದ ಮೇರೆಗೆ ಮದ್ಯದ ಅಂಗಡಿಗಳು ಪ್ರಾರಂಭವಾಗುತ್ತವೆ ಎಂಬ ಸುದ್ದಿ ತಿಳಿದ ಮದ್ಯಪ್ರೀಯರು ಮದ್ಯದಂಗಡಿ ಮುಂದೆ ಕೀಲೋಮೀಟರಗಳವರೆಗೆ ಸಾಲಾಗಿ ನಿಂತಿದ್ದು ಎಲ್ಲೇಡೆ ಕಂಡು ಬಂದಿತು. ಬೆಳ್ಳಂಬೆಳಗ್ಗೆ ಮದ್ಯಪ್ರೀಯರು ಮದ್ಯದ ಅಂಗಡಿಯ ಮುಂದೆ ಸಾಲುಗಟ್ಟಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಂದಹಾಸದಿಂದ ನಿಂತಿದ್ದು ಕಂಡುಬಂದಿತು. ಮುಂಜಾಗೃತೆ ಕ್ರಮವಾಗಿ ಮದ್ಯ ಖರಿಧಿಸುವವರಿಗೆ ಅಂಗಡಿಕಾರರು ಸ್ಯಾನಿಟೈಜರನಿಂದ ಸಿಂಪಡನೆ ಮಾಡಿ ಮದ್ಯ ನೀಡುತ್ತಿದ್ದರು. ಸುಮಾರು ದಿನಗಳಿಂದ ಮದ್ಯವಿಲ್ಲದೆ ನಾವು ತುಂಬಾ ವಿಚಲಿತರಾಗಿದ್ದೆವು, ಶ್ರಮವಹಿಸಿ ಕೂಲಿ ಮಾಡಿ ಬದುಕುವ ನಾವು ದೇಹಕ್ಕಾಗುವ ದಣಿವನ್ನು ಶಮನ ಮಾಡಿಕೊಳ್ಳುವುದಕ್ಕಾಗಿ ಇದರ ಅವಶ್ಯಕತೆ ನಮಗಿತ್ತು ಹೀಗಾಗಿ ಮಾನ್ಯ ಸರ್ಕಾರಕ್ಕೆ ನಾವು ಅಭಿನಂಧನೆ ಸಲ್ಲಿಸುತ್ತೇವೆ ಎಂದು ಹೆಸರು ಹೇಳಲಿಚ್ಚಿಸದ ಮದ್ಯಪ್ರೀಯರೊಬ್ಬರು ತಿಳಿಸಿದರು.

Social Plugin