ಬಡವರ ನಗುಮುಖದಲ್ಲೇ ನಾನು ದೇವರನ್ನು ಕಾಣುವೇ-ಡಾ: ಪದ್ಮಜೀತ ನಾಡಗೌಡಪಾಟೀಲ

ತೇರದಾಳ: ಕೊವಿಡ್-19ನಿಂದಾಗಿ ದೇಶವೆಲ್ಲ ಲಾಕಡೌನನಾಗಿ ಎಲ್ಲರ ಬದುಕು ಸ್ತಬ್ದವಾಗಿದೆ. ಅದರಲ್ಲೂನೇಕಾರರು,ಕುಶಲಕರ್ಮಿಗಳು, ಮಧ್ಯಮ ವರ್ಗದವರ ಬಡವರ ಇವರ ಪರಿಸ್ಥಿತಿಯಂತೂ ಆ ದೇವರೇ ಬಲ್ಲ. ಮನೆಯಲ್ಲಿರಿ ಮನೆಯಲ್ಲಿರಿ ಎಂದು ಹೇಳುತ್ತಿರುವ ಸರ್ಕಾರ ಕೇವಲ ಅಕ್ಕಿ,ಗೋಧಿ ಹಾಗೂ ಹಾಲನ್ನು ನೀಡಿ ಆರಾಮಾಗಿರಿ ಎಂದು ಹೇಳುತ್ತಿದೆ ಆದರೆ ಇಷ್ಟರ ಮೇಲೆ ಬದುಕನ್ನು ಸಾಗಿಸಲು ಸಾಧ್ಯವೇ, ಶ್ರೀಮಂತರೇನೊ ತಮ್ಮಲಿದ್ದ ಕೂಡಿಟ್ಟ ಹಣದಿಂದ ತಿಂಗಳೇನು ವರ್ಷದವರೆಗೆ ಜೀವನ ಸಾಗಿಸಬಹುದು ಆದರೆ ಅಂದೇ ದುಡಿದು ಅಂದೇ ಜೀವನ ಸಾಗಿಸುವ ಬಡವರು ಹೇಗೆ ಜೀವನ ಸಾಗಿಸಬೇಕು. ಕೂಲಿಯ ಮೇಲೆ ಜೀವನ ನಡೆಸುವ ಇವರ ಜೀವನ ಕೂಲಿ ಇಲ್ಲದೆ ಇವರ ಬದುಕು ದಿಕ್ಕು ತಪ್ಪಿ ಹೋಗಿದೆ. ಇಂತಹ ಸಮಯದಲ್ಲಿ ಆಪದ್ಭಾಂದವರಂತೆ ಬಂದ ಡಾ: ಪದ್ಮಜೀತ ನಾಡಗೌಡಪಾಟೀಲ ಫೌಂಡೇಶನನ ಸಂಸ್ಥಾಪಕರಾದ ವೈಧ್ಯ ಪದ್ಮಜೀತರವರು ಇವರ ಬದುಕಿಗೆ ದಿಕ್ಕು ತೋರಿಸಿ ಬಡವರ ಕಣ್ಣೀರೊರೆಸಲು ಮುಂದಾಗಿದ್ದಾರೆ. ಇವರಿಂದ ಸಹಾಯ ಪಡೆದ ಎಷ್ಟೋ ಬಡ ಕುಟುಂಬಗಳು ಇವರಿಗೆ ತುಂಬು ಹೃದಯದಿಂದ ಆಶಿರ್ವದಿಸುತ್ತಿದ್ದಾರೆ. ಬಡವರ ಬಗ್ಗೆ ಕಾಳಜಿಯುಳ್ಳ ಸಹೃದಯ ವೈಧ್ಯ ಪದ್ಮಜೀತರನ್ನು ಪುರಸಭೆಯ ಸದಸ್ಯರಾದ ಫೈಜುಲ್ಲಾ ಇನಾಮದಾರರವರು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಜೀತರು ನಾನು ಮಾಡುತ್ತಿರುವುದು ಒಂದು ಅಳಿಲು ಸೇವೆ ನಾನು ವೃತ್ತಿಯಲ್ಲಿ ವೈಧ್ಯರಾಗಿರಬಹುದು ಆದರೆ ಈ ಬಡವರಿಗೆ ನನಗೆ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಅವರು ಹೊಟ್ಟೆ ಹಸಿದು ಉಪವಾಸ ಇರುವಾಗ ನಾವು ನೋಡಿಕೊಂಡು ಹಾಗೆ ಸುಮ್ಮನೆ ಇರುವುದು ಮಾನವೀಯತೆ ಅಲ್ಲ ಅವರು ನಮ್ಮಂತೆ ಮನುಷ್ಯರಲ್ಲವೇ ಇಂತಹ ಸಂಧರ್ಭದಲ್ಲಿ ಸಹಾಯ ಮಾಡದೇ ಇನ್ಯಾವ ಸಂಧರ್ಭದಲ್ಲಿ ಸಹಾಯ ಮಾಡಬೇಕು ಇದೊಂದು ನನಗೆ ದೈವ ಕೊಟ್ಟ ಸದಾವಕಾಶ ಎಂದು ಭಾವಿಸಿದ್ದೇನೆ. ಬಡವರ ನಗುಮುಖದಲ್ಲಿ ನಾನು ದೇವರನ್ನು ಕಾಣುತ್ತೇನೆ ಎಲ್ಲರು ಸುಖವಾಗಿರಲಿ ಎನ್ನುವುದು 
ನನ್ನಾಶೆಯಾಗಿದೆ ಎಂದು ಪತ್ರಿಕೆಗೆ ತಿಳಿಸಿದರು.