ಬೆಂಗಳೂರಿನಲ್ಲಿ ಮಂಗಳವಾರ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ತೇರದಾಳ ಶಾಸಕ ಸಿದ್ದು ಸವದಿ ನೇಕಾರರ ಸಮಸ್ಯೆಗಳಿಗೆ ಪರಿಹರಿಸುವಂತೆ ಅರ್ಜಿ ನೀಡಿದರು.
ನೇಕಾರರ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ
ರಾಜ್ಯದ ನೇಕಾರ ಕುಟುಂಬಕ್ಕೆ ತಲಾ 2 ಸಾವಿರ ರೂ. ಸಾಲ ಮನ್ನಾ ನಿಗದಿತ ದಿನಾಂಕ ವಿಸ್ತರಣೆ
ಮೇ5: ಕೊರೊನಾ ವೈರಸ್‍ನ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ತೀವ್ರ ಸಂಕಷ್ಟಕ್ಕೀಡಾಗಿರುವ ರಾಜ್ಯದ ನೇಕಾರ ಸಮುದಾಯಕ್ಕೆ ರಾಜ್ಯ ಸರ್ಕಾರ ಸ್ವಲ್ಪಮಟ್ಟಿಗೆ ಆಸರೆಯಾಗುವ ಮೂಲಕ ನೇಕಾರರ ಜೀವನೋಪಾಯಕ್ಕೆ ಸಬಲೀಕರಣವಾಗುವಲ್ಲಿ ಕಾರಣವಾಗಿದೆ.
ಮಂಗಳವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಸಿದ್ದು ಸವದಿ, ವೀರಣ್ಣ ಚರಂತಿಮಠ ಹಾಗು ಅಭಯ ಪಾಟೀಲ ನೇತೃತ್ವದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಅರ್ಜಿ ಸಲ್ಲಿಸುವ ಮೂಲಕ ರಾಜ್ಯದ ನೇಕಾರರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಶೀಘ್ರವೇ ಪರಿಹಾರ ಒದಗಿಸುವಂತೆ ತಿಳಿಸುತ್ತಿದ್ದಂತೆ, ಪ್ರತ್ಯುತ್ತರವಾಗಿ ಸಿಎಂ ಸ್ಪಂದಿಸುವಲ್ಲಿ ಯಶಸ್ವಿಯಾದರೆಂದು ಶಾಸಕ ಸವದಿ ತಿಳಿಸಿದರು.
ರೈತರ ಕಿಸಾನ ಸಮ್ಮಾನ ಯೋಜನೆಯಡಿಯಲ್ಲಿ ನೇಕಾರ ಸಮ್ಮಾನ ಯೋಜನೆಗೆ ಸಂಕಷ್ಟದಲ್ಲಿರುವ ಕೆಎಚ್‍ಡಿಸಿ ಹಾಗು ಕೈಮಗ್ಗ ನೇಕಾರರಿಗೆ, ಅದರಂತೆ ಪಾವರ್‍ಲೂಮ್ ನೇಕಾರರ ಪ್ರತಿ ಕುಟುಂಬಕ್ಕೂ ತಲಾ 2 ಸಾವಿರ ರೂ.ಗಳಂತೆ ಪರಿಹಾರವಾಗಿ ಆಯಾ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವದಾಗಿ ತಿಳಿಸಿದ್ದಲ್ಲದೆ, ಪ್ರಮುಖವಾಗಿ ನೇಕಾರರು ಸಹಕಾರಿ ಸಂಘಗಳಿಂದ ಪಡೆದಿರುವ ಸಾಲ ಮನ್ನಾದ ಯೋಜನೆಗೆ ಸಂಬಂಧ ದಿನಾಂಕ ವಿಸ್ತರಣೆಗೆ ಕಳೆದ 2019, ಡಿಸೆಂಬರ್ ಅಂತಿಮ ತಿಂಗಳಾಗಿದ್ದನ್ನು, ಮುಂದಿನ ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಯಿತು. 
ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ನೇಕಾರರು ಹಾಗು 35 ಸಾವಿರ ಕೈಮಗ್ಗ ನೇಕಾರರು ಸಂಕಷ್ಟದಲ್ಲಿದ್ದು, ಒಟ್ಟಾರೆ 4 ಲಕ್ಷ ನೇಕಾರರಿಗೆ ಈ ಯೋಜನೆ ದೊರೆಯಲಿದೆ.

"ಸ್ವರೂಪ ಸಂದರ್ಶನ" ಲೈಕ್ ಮಾಡಿ ಮತ್ತು share ಮಾಡಿ ...