ಬಾಗಲಕೋಟೆ ಜಿಲ್ಲೆ
ರಸ್ತೆಗಿಳಿದ ಕೆಎಸ್ಆರ್ಟಿಸಿ ಬಸ್
ಸಾರ್ವಜನಿಕರ ಮುಖದಲ್ಲಿ ಮಂದಹಾಸ

ಮಹಾಮಾರಿ ಕೊರೊನಾ  ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿತ್ತು ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್ ಡೌನ್  ಆದೇಶ ಮಾಡಿತ್ತು.

ಕಳೆದ 70 ದಿನಗಳಿಂದ  ಭಾರತದೇಶ ಲಾಕ್ ಡೌನ್ ಆದೇಶದಿಂದ ಎಲ್ಲ ಕೆಎಸ್ಆರ್ಟಿಸಿ  ಬಸ್  ಡಿಪೋ ಸೇರಿದವು. ಇಂದು ಸರ್ಕಾರದ ಆದೇಶದಂತೆ ಕೆಎಸ್ಆರ್ಟಿಸಿ ಬಸ್ ರಸ್ತೆಗಿಳಿದು ಸಂಚರಿಸುತ್ತಿವೆ ಇದನ್ನು ಕಂಡ ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ 6 ಬಸ್ಸು ನಗರದಲ್ಲಿ ಇಂದು ಸಂಚರಿಸಿದವು.

  
 ರಸ್ತೆ ಸಾರಿಗೆ ಸಂಸ್ಥೆಯು ಇಂದು ಬೆಳಗ್ಗೆ 7ಗಂಟೆಯಿಂದ  ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಗರದ ಬಸ್ ನಿಲ್ದಾಣದಿಂದ ಹೊರಟಿರುವ ಕೆಎಸ್ಆರ್ಟಿಸಿ ಬಸ್ ಗಳು  ಸಾರ್ವಜನಿಕರು ಪ್ರಯಾಣ ಮಾಡಲು ಬಂದಂತೆಲ್ಲಾ ಪ್ರಯಾಣಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟರೈಝಿಂಗ್ ಮಾಡಿಸಿˌ  ನಂತರ 30   ಜನರನ್ನು ಮಾತ್ರ ಪ್ರಯಾಣ  ಮಾಡಲು ಅವಕಾಶ   ಕೊಡಲಾಗುತ್ತಿದೆ .
 ರಬಕವಿ ಬಸ್ ನಿಲ್ದಾಣದ ಅಧಿಕಾರಿ  ಐ ಬಿ ಗಾಣಿಗೇರ್  ಮಾತನಾಡಿ. ನಮ್ಮ ಮೇಲೆ ಅಧಿಕಾರಿಗಳ ಆದೇಶದಂತೆ ಸರ್ಕಾರವು ವಿಧಿಸಿರುವ ನಿಯಮಾನುಸಾರವೇ ಬೆಳಿಗ್ಗೆ ಏಳರಿಂದಲೇ ನಮ್ಮ ವಿಭಾಗದಿಂದ ಬಸ್ ಗಳ ಸೇವೆಯನ್ನು ಪ್ರಾರಂಭಿಸಲಾಗಿದ್ದು ಮೊದಲನೇ ದಿನ ಆದ್ದರಿಂದ ಮಾತ್ರ ಸಾರ್ವಜನಿಕರಿಗೆ ಒಂದಷ್ಟುಗೊಂದಲ ಆಗುವಂತಾಗಬಹುದು ಆದರೆ ದಿನ ಕಳೆದಂತೆ ಇದು ಅಂತಹ ಸಮಸ್ಯೆಯೇನೂ ಆಗುವುದಿಲ್ಲಾ ನಾವು ಅತಿ ಎಚ್ಚರಿಕೆಯಿಂದಲೇ ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ಸಾಮಾಜಿಕ ಅಂತರ ಹಾಗೂ ಪ್ರಯಾಣಿಕರಿಗೆ    ಸ್ಯಾನಿಟರೈಝಿಂಗ್ ಮಾಡುವ ಮೂಲಕ  ಸಂಚರಿಸಲು ಪ್ರಯಾಣಿಕರಿಗೆ ಜಾಗೃತ ಮೂಡಿಸಿದ್ದೇವೆ ಮತ್ತು ಪ್ರತಿಯೊಬ್ಬ ಪ್ರಯಾಣಿಕನ ಹೆಸರು ದೂರವಾಣಿ ಸಂಖ್ಯೆ ಬರೆದು ಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿ ಎಸ್ ಜಿ ಗಲಗಲಿ. ಸೇರಿದಂತೆ ಮುಂತಾದವರು ಇದ್ದರು.
ವರದಿ : ಪ್ರಕಾಶ ಕುಂಬಾರ ( ರಬಕವಿ )