ಕೆ.ಎಸ್.ಆರ್.ಟಿ.ಸಿ. ಬಸ್‍ಗೆ ಚಾಲನೆ;

ವರದಿ: ಪ್ರಭು ಜೈನರ

ತೇರದಾಳ: ರಾಜ್ಯಾದ್ಯಂತ ಕೊರೋನ ವೈರಸ್ ನಿಂದಾಗಿ ಲಾಕ್‍ಡೌನ್ ಆದಾಗಿನಿಂದ ಸ್ಥಗಿತವಾಗಿದ ಬಸ್ ಸಂಚಾರ ಇಂದು ಮೊದಲ ಬಾರಿಗೆ ಮತ್ತು ಪಟ್ಟಣದಲ್ಲಿ ಜಮಖಂಡಿಯಿಂದ ತೇರದಾಳವರೆಗೆ ಬಸ್ ಸಂಖ್ಯೆ ಕೆ.ಎ.42-313 ಆರಂಭವಾಗಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಲಾಯಿತು. ಒಂದು ಬಸ್‍ಗೆ 30 ಪ್ರಯಾಣಿಕರು ಮಾತ್ರ ಪ್ರಯಾಣ ಮಾಡುವುದು ಮತ್ತು   ನಿಗದಿತ ಬಸ್ ದರದೊಂದಿಗೆ ಪ್ರಯಾಣಿಸುವುದು, ಅದು ಅಲ್ಲದೆ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕನ್ನು ಧರಿಸಿರಲೆಬೇಕು ಪ್ರಯಾಣ ಮಾಡುವ ಪ್ರತಿಯೊಬ್ಬ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ ಮಾಡಿ ಕೈಗಳಿಕೆ ಸ್ಯಾನಿಟೈಸರ ಸಿಂಪಡನೆ ಮಾಡಬೇಕೆಂಬ  ಕಟ್ಟುನಿಟ್ಟಿನ ಆದೇಶವಿರುವುದರಿಂದ ಎಲ್ಲ ಪ್ರಯಾಣಿಕರು ಸಹಕರಿಸಬೇಕೆಂದು ಕಂಟ್ರೋಲರ ಎಸ್.ಬಿ.ವಾಜಂತ್ರಿ ತಿಳಿಸಿದರು. ಈ ಸಂಧರ್ಭದಲ್ಲಿ ಕಂಟ್ರೋಲರಾದ ಎಸ್.ಡಿ.ನಿಡೋಣಿ ಚಾಲಕರಾದ ರಮೇಶ ಲಮಾಣಿ, ಕಂಡಕ್ಟರಾದ ಶಿವಮೂರ್ತಿ ಮತ್ತು ಸ್ಥಳೀಯರಾದ ಶಂಕರ ಕುಂಬಾರ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.