ತೇರದಾಳ: ಪಟ್ಟಣದ ಬಸವ ಕಾಲನಿಯ ವಾರ್ಡ ನಂಬರ 7ರ ಸಾರ್ವಜನಿಕರು ಸಮೀಪದ ತಮ್ಮ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಭಯಭೀತರಾಗಿ ತಮ್ಮ ಪ್ರದೇಶದಲ್ಲಿರುವ ರಸ್ತೆಗಳಿಗೆ ಕಲ್ಲುಗಳನ್ನು ಅಡ್ಡಲಾಗಿಟ್ಟು ರಸ್ತೆಯನ್ನು ಬಂದ ಮಾಡಿದರು. ಈ ಕುರಿತು ಮಾತನಾಡಿದ ವಾರ್ಡಿನ ಮಹಿಳೆ ಸುಶೀಲಾ ಜನವಾಡಕರ ಇವರು ಇಲ್ಲಿ ನಾವು ಕೂಲಿ ಕಾರ್ಮಿಕರು ಜನಜಂಗುಳಿಯಿಂದ ಕೂಡಿದ ಪ್ರದೇಶ ನಮ್ಮದಾಗಿದ್ದು, ಸಣ್ಣ ಸಣ್ಣ ಮಕ್ಕಳು, ವಯೋವೃದ್ಧರು ಹೆಚ್ಚಾಗಿದ್ದು ಒಂದು ವೇಳೆ ನಮ್ಮ ಪ್ರದೆಶದಲ್ಲಿ ಕ್ವಾರಂಟೈನ್ ಮಾಡಿದ್ದೆ ಆದಲ್ಲಿ ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೋಣೆ?ಇಲ್ಲಿರುವ ನಾವೆಲ್ಲ ತುಂಬಾ ಬಡವರು ಈಗ ನಮ್ಮ ಕೈಯಲ್ಲಿ ಕೆಲಸವಿಲ್ಲದೆ ಬಿಡಿಗಾಸು ಕೂಡಾ ಇಲ್ಲಾ, ಹೇಗೋ ಎನೋ ಬದುಕು ಸಾಗಿಸುತ್ತಿದ್ದೇವೆ. ಈ ಬಗ್ಗೆ ಯಾರೂ ನಮ್ಮನ್ನು ಕೇಳುತ್ತಿಲ್ಲ ಸರಕಾರವೇನೋ ಅಕ್ಕಿ, ಗೋಧಿ ಕೊಡತಾ ಇದೆ ಆದರೆ ಇಷ್ಟರ ಮೇಲೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಮುಂಚೆ ಕೆಲವು ದಾನಿಗಳು ತರಕಾರಿ ಕಿಟ್‍ನ್ನು ಕೊಟ್ಟು ಪುಣ್ಯ ಕಟ್ಟಿಕೊಂಡಿದ್ದಾರೆ, ಆದರೆ ನಮಗೆ ಬೆಕಾಗಿದ್ದು ದಿನಸಿ ವಸ್ತುಗಳು ಇದನ್ನು ಯಾರು ಕೊಡತಾ ಇಲ್ಲ ಈ ಬಗ್ಗೆ ಸರಕಾರ ಗಮನ ಹರಿಸಿ ನಮಗೆ ದಿನಸಿ ಕಿಟ್‍ನ್ನು ಕೊಡುವ ವ್ಯವಸ್ಥೆ ಮಾಡಬೇಕು ಅದುಅಲ್ಲದೆ ಕೂಲಿ ಮಾಡಿ ಬದುಕುವ ನಮಗೆ ಸರಕಾರವು ಇತರರಂತೆ ಕೂಡಲೆ ಆರ್ಥಿಕ ಸಹಾಯ ನೀಡಬೇಕು. ಪ್ರಾಣ ರಕ್ಷಣೆಗಾಗಿ ಪಣ ತೊಟ್ಟಿರುವ ಸರ್ಕಾರ ನಮ್ಮನ್ನು ಮನೆಯೋಳಗೆ ಕೂಡಿ ಹಾಕಿ ಪ್ರಾಣ ಹಿಂಡುತ್ತಿದೆ. ಈಗಾಗಲೇ ನಮ್ಮ ಕೈ ಸೋತು ಹೋಗಿದೆ ಸರಕಾರ ಕೈ ಹಿಡಿಯದಿದ್ದರೆ ನಮ್ಮ ಬದುಕು ಇಲ್ಲಿಯೇ ಮುಳುಗಿ ಹೋಗುತ್ತದೆ ಎಂದು ಹಲವಾರು ತಾಯಂದಿರು ಪತ್ರಿಕೆಗೆ ತಿಳಿಸಿದರು.
Social Plugin