ಸತ್ತ ಮೀನುಗಳಿಂದ ಕಲುಷಿತಗೊಂಡ ನೀರನ್ನು ಹೊರತಗೆಯಲು ಕ್ರಮ ಕೈಕೊಳ್ಳುಲಾಗುವುದು.
ತೇರದಾಳ: ಇತ್ತೀಚೇಗೆ ಸುಮಾರು ದಿನಗಳ ಹಿಂದೆ ಪಟ್ಟಣದ ಐತಿಹಾಸಿಕ ಜೀರಗೇರೆ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಹೋಗಿದ್ದವು. ವಾಸ್ತವವಾಗಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಗುತ್ತಿಗೆದಾರರಿಗೆ ಈ ಕೆರೆಯನ್ನು ಗುತ್ತಿಗೆನೀಡಲಾಗಿತ್ತು.ಹೀಗಾಗಿ ಕೆರೆಯಲ್ಲಿ ಮೀನುಗಳು ಬೃಹದಾಕಾರವಾಗಿ ಬೆಳೆದಿದ್ದರಿಂದ,ಕೆರೆಯಲ್ಲಿದ್ದ ಅಲ್ಪ ಪ್ರಮಾಣದಲ್ಲಿ ನೀರಿನಿಂದ ಅವುಗಳಿಗೆ ಬೇಕಾದ ಗರಿಷ್ಠ ಪ್ರಮಾಣದ ಆಮ್ಲಜನಕ ಸಿಗದೆ ಮೀನುಗಳು ಸಾವನಪ್ಪಿರುತ್ತವೆ ಎಂದು ಸಂಬಂಧಿಸಿದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು.ನಂತರ ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ದಡ್ಡಿಯವರು ಸಾರ್ವಜನಿಕರಿಗೆ ಸತ್ತ ಮೀನುಗಳ ದುರ್ವಾಸನೆಯಿಂದ ಹತ್ತಿರದ ನಿವಾಸಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಕೂಡಲೆ ಸತ್ತ ಮೀನುಗಳನ್ನು ಹೂಳಿಸಿದರು. ಆದರೆ ಈಗ ಪುನಃ ಸಾರ್ವಜನಿಕರು ಸತ್ತ ಮೀನುಗಳಿಂದ ನೀರೆಲ್ಲ ಕಲುಷಿತಗೊಂಡು ಈ ಭಾಗದಲ್ಲೆಲ್ಲ ದುರ್ವಾಸನೆ ಬೀರುತ್ತಲಿದೆ, ಕಾರಣ ಸಂಬಂಧಿಸಿದ ನೀರನ್ನೂ ಸಹ ಸಂಪೂರ್ಣವಾಗಿ ಖಾಲಿ ಮಾಡಬೇಕೆಂದು ವಿನಂತಿಸಿಕೊಂಡಿದ್ದು ಈ ಕುರಿತು ಸಂಬಂದಿಸಿದ ವಿಷಯವನ್ನು ಮುಖ್ಯಾಧಿಕಾರಿ ಈರಣ್ಣ ದಡ್ಡಿಯವರ ಗಮನಕ್ಕೆ ತಂದಾಗ ಕೂಡಲೆ ಅಧಿಕಾರಿಯವರು ಈ ವಿಷಯವು ನನ್ನ ಗಮನಕ್ಕೂ ಬಂದಿದ್ದು ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರಲ್ಲದೆ,ಈಗಾಗಲೆ ಬೇಸಿಗೆಪ್ರಾರಂಭವಾದದ್ದರಿಂದ ಕೆರೆಯಲ್ಲಿನ ನೀರು ತಗೆದರೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೋರವೆಲ್‍ಗಳಿಗೆ ಅಂತರ್ಜಲದ ಮಟ್ಟ ಕಡಿಮೆಯಾಗಿ ನೀರಿನ ಕೊರತೆಯಾಗುವ ಸಂಭವವಿದೆ.ಆದ್ದರಿಂದ ಈ ಬಗ್ಗೆ ಕೂಡಲೆ ಹಿರಿಯ ಅಧಿಕಾರಿಗಳೊಂದಿಗೆ ಇದರ ಸಾಧಕ ಬಾಧಕ ಬಗ್ಗೆ ಚರ್ಚಿಸಿ ಅವರ ಮಾರ್ಗದರ್ಶನದ ಮೇಲೆ ಮುಂದಿನ ಕ್ರಮಕೈಕೊಳ್ಳಲಾಗುವುದು ಎಂದು ತಿಳಿಸಿದರು.
Social Plugin