ವರದಿ: ಪ್ರಭು ಜೈನರ.   
   
ತೇರದಾಳ: ಕೋರೋಣ ವೈರಸ್ ನಿಮಿತ್ಯ ಎಲ್ಲರ ಬದುಕು ಲಾಕ್ ಡೌನ್ ಆಗಿಹೋಗಿದೆ. ಅದೇ ರೀತಿ ಚಮ್ಮಾರ ಸಮಾಜದವರು ತಮ್ಮ ದೈನಂದಿನ ಕಾರ್ಯಗಳಿಂದ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದರು, ಅಂಥವರು ಸ್ಥಿತಿಯೂ ಕೂಡ ಇಂದು ಚಿಂತಾಜನಕವಾಗಿದೆ. ಇದನ್ನು ಅರಿತ ಸ್ಥಳೀಯ ಪುರಸಭೆಯ ಸದಸ್ಯರಾದ ಹಾಗೂ ಕಾಂಗ್ರೆಸ್ ಮುಖಂಡರಾದ ಸುರೇಶ ಕಬಾಡಗಿ ಅವರು ತಮ್ಮ ಸ್ವಂತ ಖರ್ಚಿನಿಂದ ಚಮ್ಮಾರ ಸಮಾಜದ ಏಳು ಕುಟುಂಬಗಳ ಅತಿ ಕಡುಬಡವರಿಗೆ ಕಿರಾಣಿ ದಿನಸಿ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಸದರಿ  ಕಿಟ್ ನಲ್ಲಿ ಸಕ್ಕರೆ, ಗಾಣದ ಎಣ್ಣೆ, ಹೆಸರುಕಾಳು, ಹೆಸರುಬೇಳೆ, ಬಟ್ಟೆ ಸೋಪು, ಮೈಕೈ ಸೋಪು, ಪೇಸ್ಟ್ ಮತ್ತು ಚಹಾ ಪುಡಿಯನ್ನು ಒಳಗೊಂಡಿದೆ. ಕಿರಾಣಿ ದಿನಸಿ ವಸ್ತುಗಳನ್ನು ಪಡೆದುಕೊಂಡ ಫಲಾನುಭವಿಗಳು ಭಾರತಿ ನಕುಸಾ ಸಣ್ಣಕ್ಕಿ, ಸುರೇಖಾ ಸುರೇಶ್ ಸಣ್ಣಕ್ಕಿ, ಸಂಗೀತ ಸುನಿಲ್ ಕೊಡತೆ, ಗೀತಾ ರಾಜೇಶ್ ಸಣ್ಣಕ್ಕಿ, ಪರಶುರಾಮ್ ಕೊಡತೆ, ದೊಂಡಿಬಾ ತೋರೆ ಮತ್ತು ವಚಲಾ ಬಾಬಾಸಾಬ್ ಸಣ್ಣಕ್ಕಿ. ಈ ಸಂದರ್ಭದಲ್ಲಿ ಜಗದೀಶ್ ಕಬಾಡಗಿ, ಸುಜೀತ ದಾನಿಗೊಂಡ, ಮಲ್ಲಪ್ಪ ನಾರಿಗೊಂಡ ಡಾಕ್ಟರ್: ಶಿವಾನಂದ ಜಾಧವ ಉಪಸ್ಥಿತರಿದ್ದರು.