ಬಾಗಲಕೋಟೆ ಜಿಲ್ಲೆ
 ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ರಬಕವಿ ಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರಧಾನ ಮಂತ್ರಿ  ನಿಧಿ ಸಂಗ್ರಹದ ಮಹಾಸಂಪರ್ಕ ಅಭಿಯಾನವನ್ನು ಶಾಸಕ ಶ್ರೀ .ಸಿದ್ದು ಸವದಿ ಚಾಲನೆ ಮಾಡಿದರು.

 ರಬಕವಿ  ಪ್ರಮುಖ ಬೀದಿಗಳಲ್ಲಿ   ದೇಶದ ಆರ್ಥಿಕ ಸುಧಾರಣೆಗಾಗಿ ನಾವೆಲ್ಲರೂ ಅಭಿಯಾನದ ರೀತಿಯಲ್ಲಿ  ಪ್ರದಾನ ಮಂತ್ರಿ ನಿಧಿ ಫಂಡಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಇಂದು ರಬಕವಿ  ನಗರದ ನಾಗರಿಕರಲ್ಲಿ  ವಿನಂತಿ ಮಾಡಿಕೊಂಡರು.

 ಪ್ರತಿಯೊಬ್ಬರು ತಮ್ಮ ಶಕ್ತಿ ಮಿರಿ ನಿಧಿ ಸಮರ್ಪಣೆ ಮಾಡಿದರು. ಪರಿಹಾರ ನಿಧಿಗೆ ಧನ ಸಹಾಯ ಮಾಡಲು  ರಬಕವಿ  ಹಾಗು ಕ್ಷೇತ್ರದ ಎಲ್ಲ ಜನ ಪಕ್ಷ ಬೇಧ ಮರೆತು ಬಡವ ಬಲ್ಲಿದ ಭೇದ ಭಾವ ಎನ್ನದೆ ಮುಂದೆ ಬಂದು ಧನಸಹಾಯ ಮಾಡಿದರು.
 ಬಳಿಕ ನಾಗರಿಕರಿಂದ ಸಂಗ್ರಹಿಸಿದ 20 ಸಾವಿರಕ್ಕೂ ಹೆಚ್ಚು ರೂ ಸಂಗ್ರಹವಾಗಿದೆ  ಸಾರ್ವಜನಿಕರು ನೀಡಿದ ಹಣವನ್ನು ಪ್ರಧಾನಮಂತ್ರಿ ನೀರಿಗೆ  ಆನ್ಲೈನ್ ಮೂಲಕ ಹಣವನ್ನು ಕಟ್ಟಿದ್ದೇವೆ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರ ಘಟಕ ಅಧ್ಯಕ್ಷ ದರೇಪ್ಪ ಉಳ್ಳಾಗಡ್ಡಿ. ಮಾಹಾದೇವ ದೂಪದಾಳ. ನಗರಸಭಾ ಸದಸ್ಯ ಸಂಜಯ ತೆಗ್ಗಿ. ಮಹಾದೇವ ಕೋಟ್ಯಾಳ. ಯಲ್ಲಪ್ಪ ಕಟಗಿ. ಶಿವಾನಂದ ಕಾಗಿ. ಬಾಬು ಮಹಾಜನ. ಮಹಾದೇವ ಆಲಕನೂರ. ಪರಪ್ಪ ಪೂಜಾರಿ. ನಂದು ಗಾಯಕವಾಡ. ನಗರಸಭ ಸದಸ್ಯ ಶ್ರೀಶೈಲ ಆಲಗುರ  ಮತ್ತು  ಬಿಜೆಪಿ ಮುಖಂಡರು ಕಾರ್ಯಕರ್ತರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.


ಪ್ರಕಾಶ ಕುಂಬಾರ