ತೇರದಾಳ: ಪಟ್ಟಣದಲ್ಲಿ ಕೊವಿಡ್-19 ಸಮಯದಲ್ಲಿ ಕೊರೋನ ವಾರಿಯರ್ಸಗಳಾದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯರಿಗೆ ಮತ್ತು ನರ್ಸಗಳಿಗೆ ಪಿ.ಪಿ.ಇ.ಕಿಟ್‍ಗಳನ್ನು ದಾನಿಗಳು, ಯುವ ಉತ್ಸಾಯಿಗಳು, ಸಣ್ಣ ಉದ್ಯಮಿದಾರರು ಮತ್ತು ಭೂವಿ ಎಂಟರಪ್ರೈಜರ್ಸನ ಮಾಲಿಕರಾದ ಬಾಹುಬಲಿ ನಿಲಜಗಿಯವರು ಸುಮಾರು 1500 ರೂಪಾಯಿಗಳ, 10 ಪಿಪಿಇ ಕಿಟ್‍ಗಳನ್ನು ವಿತರಣೆ ಮಾಡಿದರು.
ಇವರಿಗೆ ಸರಕಾರಿ ಆಸ್ಪತ್ರೆಯ ಸಿಬ್ಬಂದಿಯವರು, ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಸಹಕಾರ ಮಾಡಿದ್ದಕ್ಕೆ ಚಪ್ಪಾಳೆ ತಟ್ಟುವುದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಹಿರಿಯರಾದ ಮಹಾನಿಂಗ ಜಡಿ, ಪುರಸಭೆಯ ಸದಸ್ಯರಾದ ಸಚೀನ ಕೊಡತೆ, ಉತ್ಸಾಯಿ ಯವಕರುಕಳಾದ ಪ್ರಕಾಶ ಶೇಢಬಾಳ, ರಾಜು ಬಾಬಗೊಂಡ, ಪಾರೀಸ ಬಾಬಗೊಂಡ, ಸಂಜು ಬಾಬಗೊಂಡ, ರಾಮು ಅಂಬೋಜಿ, ಸುನೀಲ ಬಾಬಗೊಂಡ, ನಿಶಾಂತ ಬಾಬಗೊಂಡ ಮತ್ತು ಶಾಂತಿನಾಥ ಕೊರಿಗೇರಿ ಉಪಸ್ಥಿರಿದ್ದರು.
Social Plugin