ವೀರಗಾಸೆ ಪುರವಂತ ಮಹಾದೇವಪ್ಪ ಸಾವಳಗಿಗೆ ಚಿಕಿತ್ಸೆಗೆ ಸಹಾಯ ಹಸ್ತ ನೀಡಿದ ಡಾ. ಪದ್ಮಜೀತ ನಾಡಗೌಡ ಪಾಟೀಲ
ಶಸ್ತ್ರಕ್ರಿಯೆಗೆ ನೆರವಾದ ಡಾ. ನಾಡಗೌಡ
ರಬಕವಿ-ಬನಹಟ್ಟಿ
ಪಟ್ಟಣದ ವೀರಗಾಸೆ ಪುರವಂತನಾದ ಬಡಪಾಯಿ ಮಹಾದೇವಪ್ಪ ಸಾವಳಗಿಗೆ ಶಸ್ತ್ರಕ್ರಿಯೆಯ ಅವಶ್ಯವನ್ನು ಪತ್ರಿಕೆ ಕಳೆದ ದಿ.11 ರಂದು ವರದಿ ಪ್ರಸ್ತಾಪಿಸಿದ್ದನ್ನು ಓದಿದ ರಬಕವಿಯ ತ್ರಿಶಲಾದೇವಿ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಪದ್ಮಜೀತ ನಾಡಗೌಡಾ ಪಾಟೀಲ ಇವರಿಗೆ ಸಹಾಯ ಹಸ್ತ ಚಾಚುವ ಮೂಲಕ ಬಡಜೀವಿಗೆ ಆಸರೆಯಾಗುವಲ್ಲಿ ಕಾರಣರಾಗಿದ್ದಾರೆ.
ತಮ್ಮ ಸ್ವಂತ ಖಾಸಗಿ ಅಂಬ್ಯುಲೆನ್ಸ್ ವಾಹನದ ಮೂಲಕ ಬೆಳಗಾವಿಯ ಹಾರುಗೇರಿಯ ಎಲುಬು ತಜ್ಞ ಡಾ. ಸಂಜಯ ಪಾಟೀಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ವತಃ ಎಲ್ಲ ವೆಚ್ಚವನ್ನು ನಿಭಾಯಿಸುವ ಮೂಲಕ ಮಾನವೀಯತೆ ಮೆರೆಯುವಲ್ಲಿ ಕಾರಣವಾಗಿದ್ದು, ಪತ್ರಿಕೆಯು ಇವರಿಗೆ ಅಭಿನಂದಿಸುತ್ತದೆ.