ಬನಹಟ್ಟಿಯಲ್ಲಿ 25 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದ ಸಂಸದ ಪಿ.ಸಿ. ಗದ್ದಿಗೌಡರ ಹಾಗು ಶಾಸಕ ಸಿದ್ದು ಸವದಿ.
ಸ್ವದೇಶಿ ಬಳಕೆ ಉತ್ತೇಜನಕ್ಕೆ ಸರ್ಕಾರ ಬದ್ಧ
1.4 ಕೋಟಿ ರೂ. ವೆಚ್ಚದ 25 ಸಾವಿರ ದಿನಸಿ ಕಿಟ್ ವಿತರಣೆಗೆ ಚಾಲನೆ
ರಬಕವಿ-ಬನಹಟ್ಟಿ,ಮೇ25: ಚೈನಾ ದೇಶದಿಂದ ಬಂದಿರುವ ಕೊರೊನಾ ವೈರಸ್‍ನ ನಿರ್ಮೂಲನೆ ಜಗತ್ತಿನೆಲೆಡೆ ನೆಲೆಯೂರಿ ನೆಮ್ಮದಿ ಕೆಡಿಸಿದೆ. ಭಾರತದಲ್ಲಿ ಇದರ ನಿರ್ಮೂಲನೆ ಸಾಧ್ಯವಿಲ್ಲವಾದರೂ ನಿಯಂತ್ರಣದಲ್ಲಿಡುವಲ್ಲಿ ಪ್ರಧಾನಿ ಮೋದಿಯವರ ಕಾರ್ಯ ಯೋಜನೆಗಳಿಂದ ಯಶಸ್ಸಾಗಿದು ಕೊಂಚ ನಿರಾಳತೆಯನ್ನು ತೋರಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ನಗರದ ಬಸವೇಶ್ವರ(ಬಿದರಿ) ಸಮುದಾಯ ಭವನ ಆವರಣದಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವದೇಶಿ ವಸ್ತುಗಳ ಬಳಕೆಗೆ ಕೇಂದ್ರವು ಉತ್ತೇಜನ ನೀಡುವಲ್ಲಿ ಸಹಕಾರಿಯಾಗಿದ್ದು, ದೇಶದ ಜನತೆ ಇದಕ್ಕೆ ಪೂರಕ ಸಹಕಾರ ನೀಡಬೇಕು. ಇದರಿಂದ ದೇಶಕ್ಕೆ ಹೆಚ್ಚು ಬಲವಾಗುವದೆಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಹಲವಾರು ದಾನಿಗಳು ಕೈ ಜೋಡಿಸಿದ್ದು, ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಪಟ್ಟಣಗಳ ಸುಮಾರು 25 ಸಾವಿರ ಸಂಕಷ್ಟದ ಕುಟುಂಬಗಳಿಗೆ ಸುಮಾರು 1.4 ಕೋ ರೂ.ಗಳ ವೆಚ್ಚದಲ್ಲಿ ದಿನಸಿ ಕಿಟ್‍ಗಳನ್ನು ಒದಗಿಸಲಾಗುತ್ತಿದೆ. ಕಡುಬಡವರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಉಳ್ಳವರು ಇದಕ್ಕೆ ಸಹಕಾರ ನೀಡಬೇಕೆಂದರು.
ಗ್ರಾಮೀಣ ಪ್ರದೇಶದಲ್ಲಿ ಒಕ್ಕಲುತನ, ಕೂಲಿ ಲಾಕ್‍ಡೌನ್ ಸಂದರ್ಭದಲ್ಲಿಯೂ ಅಷ್ಟೊಂದು ಪರಿಣಾಮ ಬೀರಿಲ್ಲ. ಮಹಾಪೂರ ಸಂದರ್ಭ ಅಂಥಹ ಕುಟುಂಬಗಳಿಗೆ ಸಹಕಾರಿಯಾಗಿರುವ ಕಾರಣ ಸ್ವಯಂಪ್ರೇರಿತವಾಗಿ ಪಟ್ಟಣ ಪ್ರದೇಶದ ಕುಟುಂಬಗಳಿಗೆ ಸಹಕರಿಸುವಲ್ಲಿ ಮುಂದೆ ಬಂದಿರುವದಕ್ಕೆ ಅಭಿನಂದಿಸಿದರು. ವಿತರಣೆ ನಂತರ ಇನ್ನೂ ಕುಟುಂಬಗಳಿಗೆ ತಲುಪದಿದ್ದಲ್ಲಿ ಮತ್ತೇ ಕಿಟ್‍ಗಳನ್ನು ತಯಾರಿಸಿ ನೀಡಲಾಗುವದೆಂದು ತಿಳಿಸಿದರು.
ಈ ಸಂದರ್ಭ ತಹಶೀಲ್ದಾರ ಪ್ರಶಾಂತ ಚನಗೊಂಡ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಧರೆಪ್ಪ ಉಳ್ಳಾಗಡ್ಡಿ, ಭೀಮಶಿ ಮಗದುಮ್, ಜಿಪಂ ಸದಸ್ಯ ಪುಂಡಲೀಕ ಪಾಲಭಾಂವಿ, ಸಿದ್ಧನಗೌಡ ಪಾಟೀಲ, ಮಲ್ಲು ಬಾಣಕಾರ, ರಾಜು ಅಂಬಲಿ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಸುರೇಶ ಅಕ್ಕಿವಾಟ, ರಮೇಶ ಮಂಡಿ, ಕುಮಾರ ಕದಂ, ಶ್ರೀಶೈಲ ಬೀಳಗಿ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ತುಕ್ಕಣ್ಣವರ ಸೇರಿದಂತೆ ಅನೇಕರಿದ್ದರು. 

ಜಾಹೀರಾತು