ರಾಜ್ಯ ಸರಕಾರ ರವಿವಾರ ಲಕ್‍ಡೌನ್ ಘೋಷಣೆ ಮಾಡಿದ್ದರಿಂದ ತೇರದಾಳ ಪಟ್ಟಣದಲ್ಲಿ ಎಲ್ಲವೂ ಬಂದ್ ಆಗಿದ್ದವು.

ತೇರದಾಳ : ರಾಜ್ಯ ಸರಕಾರ ರವಿವಾರ  ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ತೇರದಾಳ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳ ಹಾಗೂ ಇನ್ನಿತರ ವ್ಯಾಪಾರಸ್ಥರು ತಮ್ಮೆಲ್ಲ ವ್ಯಾಪಾರವನ್ನು ಬಂದ್ ಮಾಡಿದ್ದರಿಂದ ಪಟ್ಟಣವೆಲ್ಲವೂ ಬಿಕೋ ಎನ್ನುತ್ತಿತ್ತು. 

 ಕೊರೊನಾ ವೈರಸ್ ರೋಗ ತಡೆಗಟ್ಟಲು ಕಳೆದ 60ದಿನಗಳಿಂದ ರಾಜ್ಯದಲ್ಲಿ ಲಾಕ್‍ಡೌನ್ ಮಾಡಲಾಗಿತ್ತು. ಅದನ್ನು ಸ್ವಲ್ಪ ಸಡಿಲಿಕೆಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿತ್ತು. ಆಗ ಪಟ್ಟಣದ ಜನತೆಗೆ ಸ್ವಲ್ಪ ನಿರಾಳವಾಗಿತ್ತು. ಮತ್ತೇ ಈಗ ರವಿವಾರ ಕಡ್ಡಾಯವಾಗಿ ಲಾಕ್‍ಡೌನ್ ಮುಂದುವರೆಸಿದ್ದರಿಂದ ಪಟ್ಟಣದ ಪ್ರಮುಖ ವ್ಯಾಪಾರಿ ಸ್ಥಳಗಳಾದ ಜವಳಿ ಬಜಾರ, ಜೋಳದ ಬಜಾರ ಮತ್ತು ತರಾಕರಿ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂದಿತು.

  ಅಲ್ಲೊಂದು ಇಲ್ಲೊಂದು ಅವಶ್ಯಕ ಕೆಲಸದ ನಿಮಿತ್ಯ ಬೈಕ್ ಸವಾರರು ಸಂಚರಿಸುತ್ತಿರುವುದು ಕಂಡು ಬಂದಿತು. ರಾಜ್ಯದಲ್ಲಿ ವಲಸೆ ಕಾರ್ಮಿಕರ ಬರುವಿಕೆಯಿಂದ ಪ್ರತಿನಿತ್ಯ ಕೊರೊನಾ ವೈರಸ್ ಪಾಸಿಟಿವ್ ಕೆಸ್‍ಗಳು ಶತಕ, ದ್ವಿಶತಕದತ್ತ ಹೆಚ್ಚಾಗುತ್ತಲೆ ಇವೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ತಡೆಗಟ್ಟಲು ಇಂದು ರವಿವಾರ ಕಟ್ಟನಿಟ್ಟಿನ ಲಾಕ್‍ಡೌನ್ ನಿಯಮವನ್ನು ಜಾರಿಗೊಳಿಸಿದ್ದರಿಂದ ಪಟ್ಟಣದಲ್ಲಿ ಎಲ್ಲವೂ ಸ್ಥಬ್ತವಾಗಿತ್ತು.

  ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಮಜಾನ್ ಹಬ್ಬದ ಮುನ್ನಾದಿನ ಪಟ್ಟಣದಲ್ಲಿ ಪ್ರತಿ ವರ್ಷ ಭಾರಿ ವ್ಯಾಪಾರ ವಹಿವಾಟ ನಡೆಯುತ್ತಿತ್ತು. ಆದರೆ ಲಾಕ್‍ಡೌನ್ ಪ್ರಯುಕ್ತ ಇಂದು ಪಟ್ಟಣದಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ಕಂಡು ಬರಲಿಲ್ಲ. ಲಾಕ್‍ಡೌನ್‍ದಿಂದಾಗಿ ಪಟ್ಟಣದಲ್ಲಿ ಕಳೆದ ಸುಮಾರು 60ದಿನಗಳಿಂದ ಎಲ್ಲ ಧರ್ಮಗಳಲ್ಲಿ ನಡೆದ ಹಬ್ಬ ಹರಿದಿನಗಳು ಸರಳವಾಗಿ ನಡೆಯುತ್ತಲೆ ಬಂದಿರುತ್ತವೆ.