-ರಬಕವಿಯ ಎಂ.ವಿ.ಪಟ್ಟಣ ಶಾಲೆಯ ಆವರಣದಲ್ಲಿ ಡಾ.ನಾಡಗೌಡ ಫೌಂಡೇಶನ್ ಆಶ್ರಯದಲ್ಲಿ ತರಕಾರಿ ಕಿಟ್ ವಿತರಣೆ ನಡೆಯಿತು.
ರಬಕವಿ-ರಾಮಪುರ-ಹೊಸೂರಗಳಿಗೆ ತರಕಾರಿ ಕಿಟ್ ವಿತರಣೆ
ರಬಕವಿ-ಬನಹಟ್ಟಿ,ಮೇ15: ಸ್ಥಳೀಯ ಡಾ.ನಾಡಗೌಡ ಫೌಂಡೇಶನ್ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಮಹಾಲಿಂಗಪುರ, ಬನಹಟ್ಟಿ, ತೇರದಾಳ ಹಾಗೂ ಹತ್ತಾರು ಹಳ್ಳಿಗಳಲ್ಲಿರುವ ಕುಟುಂಬಗಳಿಗೆ ಅಗತ್ಯವಾಗಿರುವ ತರಕಾರಿಗಳ ಕಿಟ್ ವಿತರಣೆ ಮಾಡಲಾಗಿದೆ. ಮಂಗಳವಾರದಿಂದ ಮೂರು ದಿನಗಳ ಕಾಲ ರಬಕವಿ ರಾಮಪುರ ಮತ್ತು ಹೊಸೂರಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಮುಖಂಡ ನೀಲಕಂಠ ಮುತ್ತೂರ ತಿಳಿಸಿದರು.
ಅವರು ಮಂಗಳವಾರ ಸ್ಥಳೀಯ ಎಂ.ವಿ.ಪಟ್ಟಣ ಶಾಲೆಯ ಆವರಣದಲ್ಲಿ ತರಕಾರಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮತ್ತೋರ್ವ ಮುಖಂಡ ಶಂಕರ ಸೋರಗಾವಿ ಮಾತನಾಡಿ, ಈಗಾಗಲೇ ಅಂದಾಜು ಮೂವತ್ತು ಸಾವಿರದಷ್ಟು ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ಇನ್ನೂ 15 ಸಾವಿರ ಕಿಟ್‍ಗಳನ್ನು ವಿತರಣೆ ಮಾಡಲಾಗುವುದು. ಇಲ್ಲಿ ಯಾವುದೆ ಧರ್ಮ, ಜಾತಿ, ಮತ, ಪಂಥ ಬಡವ ಶ್ರೀಮಂತ ಎಂಬ ಬೇಧ ಭಾವ ಮಾಡದೆ ಎಲ್ಲ ಮನೆಗಳಿಗೂ ತರಕಾರಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಎ.ಬಿ.ನಾಡಗೌಡ ಪಾಟೀಲ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಸಂಜಯ ಅಮ್ಮಣಗಿಮಠ, ಪ್ರಕಾಶ ಮಂಡಿ, ಚಿದಾನಂದ ಗಾಳಿ, ಸಂಜು ಜೋತಾವರ, ಪ್ರವೀಣ ನಾಡಗೌಡ, ಭೀಮಶಿ ಪಾಟೀಲ ಸೇರಿದಂತೆ ಅನೇಕರು ಇದ್ದರು.
Social Plugin