ತೇರದಾಳ ಪಟ್ಟಣದ ಚಿಲ್ಲರೆ ವ್ಯಾಪಾರಸ್ಥರು ಶಾಸಕ ಸಿದ್ದು ಸವದಿಯವರಿಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಸಲ್ಲಿಸಿದರು.
ತೇರದಾಳ : ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ಹಾಗೂ ಊರುಗಳಿಗೆ ಹೋಗಿ ಸಂತೆಯ ದಿನದಂದು ವ್ಯಾಪಾರ ಮಾಡುವ ಜೀವನ ಸಾಗಿಸುವ ಚಿಲ್ಲರೆ ವ್ಯಾರಸ್ಥರು ಆರ್ಥಿಕ ಸಹಾಯ ಮಾಡುವಂತೆ ಶಾಸಕ ಸಿದ್ದು ಸವದಿಯವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕೊರೊನಾ ಎಂಬ ಮಾಹಾಮಾರಿ ವಕ್ಕರಿಸಿದಾಗಿನಿಂದ ಕಳೆದ 55ದಿನಗಳಿಂದ ನಮಗೆ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಸಂತೆಯು ಲಾಕ್ ಡೌನ್‍ದಿಂದಾಗಿ ನಿಷೇಧವಾಗಿರುವುದರಿಂದ ನಮ್ಮ ವ್ಯಾಪಾರವು ನಿಂತು ಹೋಗಿದೆ. ಇದೆ ವ್ಯಾಪಾರವನ್ನು ನಂಬಿ ಸುಮಾರು 20ವರ್ಷಗಳಿಂದ ಜೀವನ ಸಾಗಿಸುತ್ತ ಬಂದಿದ್ದೇವೆ. ಈಗ 55 ದಿನಗಳಿಂದ ವ್ಯಾಪಾರ ನಿಂತು ನಾವು ಜೀವನ ನಡೆಸುವುದು ಕಷ್ಟಕರವಾಗಿದೆ. ನಾವು ಮಾಡುವ ವ್ಯಾಪಾರಕ್ಕೆ ಸರಕಾರದಿಂದ ಯಾವುದೇ ರೀತಿಯ ಗುರುತಿನ ಚೀಟಿ ಇರುವುದಿಲ್ಲ.
ಸರಕಾರ ದೇಶದಲ್ಲಿನ ಹಲವು ಸಮಾಜ, ವ್ಯಾಪಾರಿಗಳನ್ನು ಗುರುತಿಸಿ ಆರ್ಥಿಕ ಸಹಾಯ ಮಾಡುತ್ತಲಿದೆ. ಅದರಂತೆ ಊರು ಊರು ಸಂಚರಿಸಿ ವ್ಯಾಪಾರ ಮಾಡುತ್ತ ಸಂತೆಗಳನ್ನು ನಂಬಿ ಜೀವನ ಸಾಗಿಸುವ ನಮಗೂ ಸಹ ಆರ್ಥಿಕ ಸಹಾಯ ಮಾಡುವಂತೆ ಹಾಗೂ ಈಗ ಸರಕಾರವು ನೀಡುತ್ತಿರುವ ಕೊರೊನಾ ಬಿಕ್ಕಟ್ಟಿನ ಪರಿಹಾರ ನಿಧಿಯಲ್ಲಿ ನಾವು ಯಾವುದೇ ರೀತಿಯಲ್ಲಿ ಒಳಪಡುವುದಿಲ್ಲ. ನಮ್ಮನ್ನು ನಂಬಿದ ನಮ್ಮ ಹಿಂದಿನ ಕುಟುಂಬ ಬದುಕಲು ಸರಕಾರದಿಂದ ಆರ್ಥಿಕ ಸಹಾಯ ಮಾಡುವಂತೆ ಶಾಸಕ ಸಿದ್ದು ಸವದಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಖವಾಸಿ, ಇನ್ನೂಸ್ ತಾಂಬೋಳಿ, ಮಲ್ಲಪ್ಪ ಹೊಸಕೋಟಿ, ವಿಠ್ಠಲ ಮೂಡಲಗಿ, ಮಹಾಂತೇಶ ಮಿರ್ಜಿ, ಪ್ರಶಾಂತ ಲಂಗೋಟಿ, ನಾಗಪ್ಪ ಖವಾಸಿ, ಫರೀದಾ ಅತ್ತಾರ, ಇಲಿಯಾಸ್ ತಾಂಬೋಳಿ, ಮಹಾದೇವ ತೊದಲಬಾಗಿ, ರಾಜೇಶ್ವರಿ ಹೊಸಕೋಟಿ ಸೇರಿದಂತೆ ಇನ್ನಿತರರು ಇದ್ದರು.
Social Plugin