ಡೆಂಪೋಡೈರಿ ನೌಕರರ ಒಂದು ದಿನದ ವೇತನ ಸಿಎಂ ಪರಿಹಾರ ನಿಧಿಗೆ
ರಬಕವಿ-ಬನಹಟ್ಟಿ,ಮೇ೨: ಕೊರೊನಾ ವೈರಸ್ ಸೋಂಕಿನಿAದ ಉಂಟಾಗಿರುವ ಸಂಕಷ್ಟವನ್ನು ಎದುರಿಸಲು ಸರ್ಕಾರಕ್ಕೆ ಸ್ಥಳೀಯ ಡೆಂಪೋ ಡೈರಿ ನೌಕರರು ಒಂದು ದಿನದ ಸಂಬಳವನ್ನು ಚೆಕ್ ಮೂಲಕ ಕೆಎಂಎಫ್‌ಗೆ ಕಳಿಸುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಖರ ಕಮಕೇರಿ ಮಾತನಾಡಿ, ಬನಹಟ್ಟಿ-ಆಸಂಗಿಯ ಡೆಂಪೋ ಡೈರಿಯುಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರು ಅವಿರತ ಸೇವೆಯ ಮೂಲಕ ಹಾಲು ಪರಿವರ್ತನೆ ಮಾಡುವ ಮೂಲಕ ಗುಣಮಟ್ಟದ ಉತ್ಪಾದನೆಗಳನ್ನು ಒದಗಿಸುವಲ್ಲಿ ಯಶಸ್ಸು ಕಂಡಿರುವದು ಗಮನಾರ್ಹ. ಅಲ್ಲದೆ ಎಲ್ಲ ನೌಕರರೂ ಸೇರಿ ತಮ್ಮ ಒಂದು ದಿನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ಒದಗಿಸುವಲ್ಲಿ ಸ್ವಯಂಪ್ರೇರಿತವಾಗಿ ನೀಡುತ್ತಿರುವದಕ್ಕೆ ಸಂತಸವೆನಿಸುತ್ತಿದೆ ಎಂದರು.ಇದೇ ಸಂದರ್ಭ ಉಪ ವ್ಯವಸ್ಥಾಪಕ ವಿಜಯಕುಮಾರ ಕಾಗಿ, ಪ್ರಭಾರ ಆಡಳಿತಾಧಿಕಾರ ಸತೀಶ ಖವಟಕೊಪ್ಪ, ಶ್ರೀಶೈಲ ಮೋಪಗಾರ, ಎಸ್.ಎಂ. ಹಾಸಿಲಕರ, ಎನ್. ಲಿಂಗA, ಪಿ. ನಟರಾಜ, ರಾಘವೇಂದ್ರ ಜೋಷಿ, ಸತೀಷ
ಹಂಚಿನಾಳ, ಸಿದ್ಧಾರೂಡ ತಳವಾರ, ಸಂತೋಷ ರಾಥೋಡ ಇದ್ದರು.

Social Plugin