ಅನಾಥನ ಗೋಳು ಕೇಳೋರ್ಯಾರು,ಕಣ್ತೆರೆದು ನೋಡುತ್ತಾ ಸರಕಾರ?

ತೇರದಾಳ:ಕೊರೊನಾದಿಂದ ಇಡಿ ದೇಶವೆ ಸ್ಥಬ್ದವಾಗಿದೆ,ಶ್ರಿಮಂತ ಬಡವರೆನ್ನದೆ ಎಲ್ಲರೂ ನಿಶ್ಚಲವಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಯಾರು ದಿಕ್ಕಿಲ್ಲದ ಅನಾಥರ ಬುದ್ದಿಮಾಂದ್ಯರ ಕಥೆಯೇ ಬೇರೆಯಾಗಿದೆ.ಬುದ್ದಿಯಿದ್ದವರೆ ಇದರಿಂದ ನಲುಗಿ ಹೋಗಿರುವಾಗ ಬುದ್ದಿಮಾಂದ್ಯರ ಕಥೆ ಕೇಳುವವರು ಯಾರು? ಅದಕ್ಕೆ ಜ್ವಲಂತ ಸಾಕ್ಷಿ ಎಂಬಂತೆ ತೇರದಾಳ ಪಟ್ಟಣದಲ್ಲಿ ಗಣಪತಿ ಎಂಬ ಹೆಸರಿನ      ಬುದ್ದಿಮಾಂದ್ಯ ,ಅನಾಥ ಅಂದಾಜು 25 ವರ್ಷದ ಯುವಕ, ಈತನ ತಂದೆ ತಾಯಿ ಸುಮಾರು ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ.ಇವನು ಸುಮಾರು ವರ್ಷಗಳಿಂದ ಪಟ್ಟಣದ ಬೀದಿ ಬೀದಿಯಲ್ಲಿ ತಿರುಗಾಡಿ


ಅವರೋ ಇವರೋ ಕೊಟ್ಟಂತಹ ಅನ್ನವನ್ನು ಸೇವಿಸುತ್ತಾ ಬಯಲಲ್ಲೇ ಕಾಲಕಳೆಯುತ್ತಿದ್ದಾನೆ.ಇತನಿಗೆ   ನಿರ್ಧಿಷ್ಠವಾದ ಸ್ಥಳವಿಲ್ಲ.ಮನಬಂದಲ್ಲಿ ಹೊರಬಯಲಲ್ಲೇ ಮಲಗಿ ತನ್ನ ಜೀವನ ಕಳೆಯುತ್ತಿದ್ದಾನೆ. ಇತ್ತೀಚೆಗೆ ಲಾಕಡೌನ ಆದಕಾರಣದಿಂದ ಸರಕಾರದ ಆದೇಶದ ಪ್ರಕಾರ ಯಾರು ಮನೆಯಿಂದ ಹೊರಬರುವಂತಿಲ್ಲ.ಇದರಿಂದ ಎಲ್ಲ ಮನೆಯ ಬಾಗಿಲುಗಳು ಮುಚ್ಚಿಹೋದವು.ಆದರೆ ಬುದ್ದಿಮಾಂದ್ಯನಾದ ಇತನಿಗೆ ಇದರ ಅರಿವಿರಲಿಲ್ಲ.ಹಸಿವನ್ನು ನೀಗಿಸಿಕೊಳ್ಳುವುದಕ್ಕಾಗಿ ಪಟ್ಟಣದಲ್ಲೆಲ್ಲ ತಿರುಗಾಡಿ ಅನ್ನಸಿಗದೆ ದಿಕ್ಕುತೋಚದೆ ಸುಸ್ತಾಗಿ ಅನಾರೋಗ್ಯಕ್ಕಿಡಾಗಿ ಪಟ್ಟಣದ ಹೊರವಲಯದ ಸ್ಮಶಾನದ ಹತ್ತಿರವಿರುವ ಕುಸ್ತಿಪಳಿ ಹತ್ತಿರವಿರುವ ಕಟ್ಟೆಯ ಮೇಲೆ ಮಲಗಿದ್ದಾನೆ.ಇದನ್ನು ಕಂಡ ದಾರಿಹೋಕರು ಪಕ್ಕದಲ್ಲಿಯೇ ಇದ್ದ ವೈದ್ಯ ಶಿವಾನಂದ ಜಾಧವರವರ ಗಮನಕ್ಕೆ ತಂದಿದ್ದಾರೆ.ಕೂಡಲೇ ಅನಾಥರ ಬಗ್ಗೆ ಕಳಕಳಿಯುಳ್ಳ   ವೈದ್ಯ ಜಾಧವರವರು ಅವನಿದ್ದಲ್ಲಿಯೇ ಹೋಗಿ ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ,ಅಲ್ಲದೆ ಲಾಕಡೌನ ಆದಾಗಿನಿಂದ ಇಂದಿನವರೆಗೂ ದಿನಂಪ್ರತಿ ಆತನಿಗೆ ಆಹಾರವನ್ನೂ ಸಹ ನೀಡುತ್ತಿದ್ದಾರೆ, ಇನ್ನೊಂದು ವಿಷಯ ಈ ಅನಾಥನು ಮಲಗಿಕೊಳ್ಳುವ ಸ್ಥಳದಲ್ಲಿಯೆ ಇವನನ್ನು ಸುತ್ತವರೆದು ಸುಮಾರು ಐದಾರು ನಾಯಿಗಳು ಸಹ ಮಲಗುತ್ತವೆ,ಹೀಗಾಗಿ ಪ್ರಾಣಿಗಳಿಂದಲೂ ಇತನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ, ಈ ಎಲ್ಲ ವಿಷಯ ಅರಿತು ಆತನಿಗೆ ಸರ್ಕಾರದಿಂದ ಏನಾದರೊಂದು ವ್ಯವಸ್ಥೆ ಕಲ್ಪಿಸಬೇಕೆಂದು ತಾಲೂಕಾ ತಹಶಿಲ್ದಾರರವರ ಗಮನಕ್ಕೆ  ತರಲಾಗಿದೆ.ಅವರು ಸಹ ಬರವಸೆ ನೀಡಿದರು,ಆದರೆ ಕೆಲಸದ ಒತ್ತಡವೇನೋ, ತಿಂಗಳಾಯಿತು ಇನ್ನೂವರೆಗೂ ಆತನಿಗೆ ಯಾವುದೇ ರೀತಿಯ ವ್ಯವಸ್ಥೆ ಮಾಡಿರುವುದಿಲ್ಲ.ಒಟ್ಟಿನಲ್ಲಿ ದಿಕ್ಕಿಲ್ಲದ ಈ ಅನಾಥನಿಗೆ ಸಹಕಾರದ ಅವಶ್ಯಕತೆ ಇದೆ, ಸರ್ಕಾರ ಕಣ್ತೆರೆದು ನೋಡುತ್ತಾ ?....