ಬನಹಟ್ಟಿಯ ನ್ಯಾಯಾಧೀಶೆ ಎಚ್. ಶ್ವೇತಾರನ್ನು ಬನಹಟ್ಟಿ ವಕೀಲರ ಸಂಘದಿಂದ ಸನ್ಮಾನಿಸಲಾಯಿತು.
ವೃತ್ತಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ
ರಬಕವಿ-ಬನಹಟ್ಟಿ,ಮೇ19: ವೃತ್ತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಕೊನೆಯ ಕ್ಷಣದಲ್ಲಿ ಅವರನ್ನು ಬೀಳ್ಕೊಡುವದು ಎಷ್ಟೋ ಸಂದರ್ಭದಲ್ಲಿ ಅತ್ಯಂತ ಕಠಿಣ. ಆದರೂ ನಿಯಮಾನುಸಾರ ವರ್ಗಾವಣೆ ಆಗಲೇಬೇಕು. ಆದರೂ ಬೀಳ್ಕೊಡಲೇಬೇಕೆಂದು ಹಿರಿಯ ನ್ಯಾಯವಾದಿ ಈಶ್ವರಚಂದ್ರ ಭೂತಿ ಹೇಳಿದರು.
ಬನಹಟ್ಟಿಯ ಕಿರಿಯಶ್ರೇಣಿ ನ್ಯಾಯಾಲಯದಿಂದ ಪದೋನ್ನತಿ ಹೊಂದಿ ವರ್ಗಾವಣೆಗೊಂಡು ತೆರಳುತ್ತಿರುವ ಎಚ್.ಶ್ವೇತಾರನ್ನು ಬನಹಟ್ಟಿ ವಕೀಲರ ಸಂಘದಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಕರ್ತವ್ಯಕ್ಕೆ ಚ್ಯುತಿಬಾರದ ರೀತಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಸರ್ವರ ವಿಶ್ವಾಸಕ್ಕೆ ಕಾರಣರಾಗಿದ್ದರು ಎಂದರು.
ಹಿರಿಯ ನ್ಯಾಯವಾದಿ ಎಂ.ಜಿ. ಕೆರೂರ ಮಾತನಾಡಿ ಸಿಹಿ ಅರಿತು ಜೀವನ ಸಾಗಿಸಿದರೆ, ಅದರಂದ ಯಶಸ್ಸು ಸಾಧ್ಯ. ನ್ಯಾಯಾಧೀಶೆ ಎಚ್. ಶ್ವೇತಾ ಅವರಿಂದ ಸಾಕಷ್ಟು ಅನುಭವದ ಪಾಠ ನ್ಯಾಯವಾದಿಗಳಿಗೆ ಸಿಕ್ಕಿದೆ ಎಂದರು. ಸಮ್ಮಾನ ಸ್ವೀಕರಿಸಿದ ಎಚ್. ಶ್ವೇತಾ ಅವರು ಅನಿಸಿಕೆ ವ್ಯಕ್ತಪಡಿಸಿದರು
ಕೆ.ಡಿ. ತುಬಚಿ, ಎಸ್.ಎ. ಶೇಗುಣಸಿ, ಎಸ್.ವಿ. ಗೊಳಸಂಗಿ, ಎಸ್.ಎಂ. ಫಕೀರಪುರ, ಅಮುಲ ಬದಾಮಿಕರ, ಬಿ.ಎನ್. ಗುರವ, ಬಿ.ಎನ್. ಕಾರ್ವೇಕರ, ಜಿ.ಡಿ. ಪಾಟೀಲ, ಮುಕುಂದ ಕೋಪರ್ಡೆ, ಎಸ್.ಜಿ. ಸಲಬನ್ನವರ, ಬಸವರಾಜ ಭೂತಿ, ರವೀಂದ್ರ ಕಾಮಗೊಂಡ, ಸಿ.ಜಿ. ಮಾಚಕನೂರ, ಎಸ್.ವಿ. ಸತ್ತಿಕರರ, ಆರ್.ಬಿ. ಯಕ್ಸಂಬಿ, ಸುಜಾತಾ ನಿಡೋಣಿ, ಎ.ಜಿ. ಪಾಟೀಲ, ಎಸ್.ಜಿ. ಕುಲಕರ್ಣಿ, ಬಿ.ಎಂ. ಲಾಳಕೆ, ವಿ.ಡಿ. ಭಸ್ಮೆ, ಡಿ.ಸಿ. ಮುರಕಂಬಿ ಸೇರಿದಂತೆ ಅನೇಕರಿದ್ದರು.

Social Plugin