- ಬನಹಟ್ಟಿಯ ಸದಾಶಿವ ವಿದ್ಯುತ್ ಚಾಲಿತ ಮಗ್ಗಗಳ ಸಹಕಾರಿ ಸಂಘದ ಸದಸ್ಯರಿಗೆ ಆಹಾರದ ಕಿಟ್ ವಿತರಣೆ ಮಾಡಿದ ಶಾಸಕ ಸಿದ್ದು ಸವದಿ
ಜೀವ ಉಳಿದರೇ ಮಾತ್ರ ಜೀವನ :ಸವದಿ 

* ಸರಕಾರ ಮತ್ತು ಆಡಳಿತದ ಜೊತೆ ಸಹಕರಿಸಿ
ರಬಕವಿ-ಬನಹಟ್ಟಿ,ಮೇ8: ಕೋವಿಡ್-19 ನಂತಹ ಪರಸ್ಥಿತಿಯಲ್ಲಿ ಜೀವ ಉಳಿದರೇ ಮಾತ್ರ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸರಕಾರ ಮತ್ತು ಆಡಳಿತದ ಜೊತೆ ಸಹಕರಿಸಿ ಎಂದು ಶಾಸಕ ಸಿದ್ದು ಸವದಿ ಹೇಳಿದರು. 
ಅವರು ನಗರದ ಸದಾಶಿವ ವಿದ್ಯುತ್ ಚಾಲಿತ ಮಗ್ಗಗಳ ಸಹಕಾರಿ ಸಂಘದ ಸದಸ್ಯರಿಗೆ ಆಹಾರದ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಹಲವಾರು ಸಂಘ-ಸಂಸ್ಥೆಗಳಿಂದ ದಿನಸಿ ಹಾಗು ತರಕಾರಿ ಕಿಟ್‍ಗಳನ್ನು ಆಯಾ ಸದಸ್ಯರಿಗೆ ಹಂಚುತ್ತಿದ್ದಾರೆ. ಮತ್ತೇ 20 ಸಾವಿರಕ್ಕೂ ಅಧಿಕ ಕಿಟ್‍ಗಳನ್ನು ಹಂಚುವ ವ್ಯವಸ್ಥೆ ಮಾಡಲಾಗುವದು. ಒಟ್ಟಾರೆ ಹಸಿವಿನಿಂದ ಯಾರೂ ಬಳಲಬಾರದೆಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಕಿಸಾನ ಸಮ್ಮಾನ ಯೋಜನೆ ಅಡಿಯಲ್ಲಿ ಕೈಮಗ್ಗ ನೇಕಾರರಿಗೆ ಮಾತ್ರ 2 ಸಾವಿರ ರೂ.ಗಳನ್ನು ಪ್ರತಿ ವರ್ಷ ನೀಡುವದಾಗಿ ತಪ್ಪು ಕಲ್ಪನೆ ಕೆಲವರದ್ದಾಗಿದೆ. ಈ ಯೋಜನೆಯು ಪಾವರ್‍ಲೂಮ್ ನೇಕಾರರಿಗೂ ಅನ್ವಯವಾಗಲಿದ್ದು, ಎಲ್ಲ ರೀತಿಯ ನೇಕಾರರೂ ಈ ಯೋಜನೆಯಲ್ಲಿ ಪಾಲ್ಗೊಳ್ಳುವರು ಎಂದು ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಸಿಪಿಐ ಜೆ. ಕರುಣೇಶಗೌಡ, ಸುರೇಶ ಚಿಂಡಕ, ಗ್ರೇಡ್-2 ತಹಶೀಲ್ದಾರ ಎಸ್. ಬಿ. ಕಾಂಬಳೆ, ಶಿವಾನಂದ ಬುದ್ನಿ, ರೇವಪ್ಪ ಗುಣಕಿ, ಸಂಘದ ಅಧ್ಯಕ್ಷರಾದ ಸಿದ್ರಾಯಪ್ಪ ಶೀಲವಂತ, ರಮೇಶ ಹುಲ್ಲೂರ, ಕಾಡಪ್ಪ ಕೊಣ್ಣೂರ, ವಿಶ್ವನಾಥ ಅಂಬಿ, ಕಾಡು ಮನವಡ್ಡರ, ಮೈಬೂಬ ನದಾಫ, ಬಾಗವ್ವ ಹನಗಂಡಿ, ಜಯಶ್ರೀ ಜೋರಿ, ಶಂಭು ಮಮದಾಪೂರ ಸೇರಿದಂತೆ ಅನೇಕರು ಇದ್ದರು.