- ಡಾ. ಪದ್ಮಜೀತ ನಾಡಗೌಡ ಪಾಟೀಲ ಫೌಂಡೇಶನ್ ವತಿಯಿಂದ ಬನಹಟ್ಟಿಯ ಬಸವಣ್ಣದೇವರ ಗುಡಿ ಸಮೀಪ ತರಕಾರಿ ಕಿಟ್ಸ್ ವಿತರಿಸಲಾಯಿತು.
ಡಾ.ನಾಡಗೌಡ ಪಾಟೀಲರ ಜನಸೇವೆ ಅಪಾರ
ರಬಕವಿ-ಬನಹಟ್ಟಿ,ಮೇ8: ಡಾ. ಪದ್ಮಜೀತನಾಡಗೌಡ ಪಾಟೀಲರ ಜನ ಸೇವಾ ಕಾರ್ಯ ದೊಡ್ಡದಾಗಿದೆ ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಹೇಳಿದರು. 
ಅವರು ಡಾ. ಪದ್ಮಜೀತ ನಾಡಗೌಡ ಪಾಟೀಲ ಫೌಂಡೇಶನ್ ವತಿಯಿಂದ ಬನಹಟ್ಟಿಯ ಬಸವಣ್ಣದೇವರ ಗುಡಿ ಸಮೀಪ ತರಕಾರಿ ಕಿಟ್ಸ್ ವಿತರಿಸಿ ಮಾತನಾಡಿದರು. ಡಾ. ನಾಡಗೌಡರು ಪ್ರತಿಯೊಂದು ಸಂದರ್ಭದಲ್ಲೂ ಬಡಜನರ ಪರವಾಗಿ ನಿಂತವರು. ಎಲ್ಲ ನೋವು ನಲಿವಿನ ಸಂದರ್ಭದಲ್ಲಿ ಬಡಜನರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿರುತ್ತಾರೆ ಅವರ ಕಾರ್ಯ ನಿಜಕ್ಕೂ ಶ್ಲ್ಯಾಘನೀಯವಾದುದು ಎಂದರು. 
ಈ ಸಂದರ್ಭದಲ್ಲಿ ಡಾ. ಪದ್ಮಜೀತ ನಾಡಗೌಡ ಪಾಟೀಲ, ಶಂಕರ ಸೊರಗಾಂವಿ, ರಾಜು ಕುಲಕರ್ಣಿ, ರವೀಂದ್ರ ಬಾಡಗಿ, ಪ್ರಭು ಕಂಕಣವಾಡಿ, ಸಂಜು ಅಮ್ಮಣಗಿಮಠ ಸೇರಿದಂತೆ ಅನೇಕರು ಇದ್ದರು.