ನದಿಯಲ್ಲಿ ಮುಳುಗಿ ಯುವಕ ಸಾವು
ರಬಕವಿ-ಬನಹಟ್ಟಿ,ಮೇ18: ಸಮೀಪದ ಮಹಿಷವಾಡಗಿ ಸೇತುವೆ ಹತ್ತಿರದ ಜಾಕವೆಲ್ ಬಳಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ನೀರಿನಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾರೆ.
ಬನಹಟ್ಟಿಯ ಸೋಮವಾರ ಪೇಟೆ ನಿವಾಸಿ ಪ್ರಕಾಶ ಕಾಡಪ್ಪ ಮಂಟೂರ(30) ಮೃತಪಟ್ಟ ದುರ್ದೈವಿ. ಸಿವಿಲ್ ಎಂಜಿನಿಯರ್ ಆಗಿದ್ದ ಈ ಯುವಕ ಸ್ನೇಹಿತರೊಂದಿಗೆ ಔತನಕೂಟಕ್ಕೆಂದು ನದಿತೆ ತೆರಳಿದ್ದಾರೆ. ಮಧ್ಹಾಹ್ನ ಊಟ ಮಾಡಿದ ನಂತರ ಸ್ನಾನ ಮಾಡುವದಕ್ಕಾಗಿ ಪ್ರಕಾಶ ನೀರಿಗೆ ಇಳಿದಿದ್ದಾನೆನ್ನಲಾಗಿದೆ. ಈಜಲು ಬಾರದ ಈ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ನುರಿತರಿಂದ ಶವ ಹೊರತೆಗೆಯಲಾಯಿತು: ಅಗ್ನಿಶಾಮಕ ದಳ ಹಾಗು ನುರಿತ ಈಜುಗಾರರ ತಂಡದೊಂದಿಗೆ ಸೋಮವಾರ ಬೆಳಗಿನ ಜಾವದಿಂದ ಶವಕ್ಕಾಗಿ ಶೋಧ ನಡೆಸಿ ಅಗ್ನಿ ಶಾಮಕ ಸಿಬ್ಬಂದಿಗಳಾದ ಎ.ಎಸ್. ಜಡೆನ್ನವರ, ಎಚ್.ಎಸ್. ಗೋಕಾಕ, ಎಂ.ಎಂ. ಪಾಟೀಲ, ಬಿ.ಕೆ. ಚೌಗಲಾ, ಎಸ್.ವಾಯ್. ಸಂದ್ರಿಮನಿ ತಂಡದೊಂದಿಗೆ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಯಿತು. ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Social Plugin