ತೇರದಾಳ ಪಟ್ಟಣದ ದೇವರಾಜನಗರ ಹಾಗೂ ಶಿಕ್ಷಕರ ಕಾಲನಿಯಲ್ಲಿರುವ ಜನರು ಪ್ರತಿಭಟನೆ ನಡೆಸಿದರು.
ತೇರದಾಳ : ಬೇರೆ ರಾಜ್ಯಗಳಿಂದ ಬಂದ 71ಜನರ ಕೊರೊಂಟೈನ್
ತೇರದಾಳ: ಪಟ್ಟಣದ ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳದ(ಗುರುಕುಲ) ಮಂಗಲ ಕಾರ್ಯಾಲಯದಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ಸುಮಾರು 71 ಜನರನ್ನು ಮಂಗಳವಾರ ತಡರಾತ್ರಿಯಲ್ಲಿ ಕ್ವಾರಂಟೈನ ಮಾಡಲಾಗಿದೆ.
ಪಕ್ಕದ ರಾಜ್ಯ ಮಹಾರಾಷ್ಟ್ರದ ಜಯಸಿಂಗಪೂರದಿಂದ 51 ಜನರನ್ನು ಮತ್ತು ಗಡಹಿಂಗ್ಲಜದಿಂದ 19 ಜನರನ್ನು ಒಟ್ಟು 71 ಜನರನ್ನು ಕ್ವಾರಂಟೈನ ಮಾಡಲಾಗಿದೆ. ಈ ಎಲ್ಲ ಜನರು ಕಡುಬಡವರಾಗಿದ್ದು ಇವರಲ್ಲಿ ಮಕ್ಕಳು, ವಯೋವೃದ್ಧರು ಇದ್ದಾರೆ. ಇವರು ತೇರದಾಳದಿಂದ ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಕೂಲಿಗಾಗಿ ದುಡಿಯಲು ಹೋದ ಜನ ಅವರನ್ನು ಸರ್ಕಾರದ ಆದೇಶದ ಮೇರೆಗೆ ಕರೆತಂದು, ತಾಲೂಕಾ ಆಡಳಿತ ಅವರನ್ನು ಜನವಸತಿ ಪ್ರದೇಶದಲ್ಲಿ ರಾತ್ರೋರಾತ್ರಿ ಕ್ವಾರಂಟೈನ ಮಾಡಿದೆ. ಈ ಘಟನೆಯನ್ನು ಅರಿತ ಸ್ಥಳೀಯರು ಮುಂಜಾನೆ ವಾಯುವಿಹಾರಕ್ಕೆಂದು ಬಂದಾಗ ಭಯಭೀತರಾಗಿ ಏನು ಮಾಡುವುದು ತಿಳಿಯದೆ ತಾಲೂಕಾ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಕ್ವಾರಂಟೈನ್ ಮಾಡಿದ ಸ್ಥಳದ ಪಕ್ಕದಲ್ಲಿಯೇ ಶಾಲಾ,ಕಾಲೇಜುಗಳು, ಗ್ರಾಮೀಣ ಆಯುರ್ವೇಧಿಕ್ ಮೆಡಿಕಲ್ ಕಾಲೇಜಿನ ಆಸ್ಪತ್ರೆ, ಶಿಕ್ಷಕರ ಕಾಲೋನಿ, ಲಂಬಾಣಿ ತಾಂಡಾ ಮತ್ತು ದೇವರಾಜ ನಗರದ ನಿವಾಸಿಗಳು ವಾಸವಾಗಿದ್ದಾರೆ.
ಕ್ವಾರಂಟೈನ ಮಾಡುವ ಸಂಧರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲದಾರ ಪ್ರಶಾಂತ ಚನಗೊಂಡ, ಬನಹಟ್ಟಿಯ ಸಿ.ಪಿ.ಐ ಕರುಣೇಶಗೌಡ ಮತ್ತು ಸ್ಥಳಿಯ ಠಾಣಾಧಿಕಾರಿಗಳಾದ ವಿಜಯ ಕಾಂಬಳೆ ಹಾಗೂ ಸಿಬ್ಬಂದಿಯವರು ಇದ್ದರು.
ಪ್ರತಿಭಟನೆ : ಸ್ಥಳೀಯ ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳದ(ಗುರುಕುಲ) ಮಂಗಲ ಕಾರ್ಯಾಲಯದಲ್ಲಿ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ಕೊರೊಂಟೈನ್ ಮಾಡುವುದನ್ನು ಕುರಿತು ಶಿಕ್ಷಕರ ಕಾಲನಿ ಹಾಗೂ ದೇವರಾಜ ನಗರದ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದರು. ಇಲ್ಲಿನ ನಿವಾಸಿಗಳು ಈಗ ನೆಮ್ಮದಿಯಿಂದ ಇದ್ದಾರೆ. ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ಇಲ್ಲಿ ಇಡುವುದರಿಂದ ಇಲ್ಲಿನ ಜನರ ನೆಮ್ಮದಿ ಗೆಡಿಸಬೇಡಿ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಪಿಎಸ್‍ಐ ವಿಜಯ ಕಾಂಬಳೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ತಿಳಿಹೇಳುವುದರ ಮೂಲಕ ಸಮಸ್ಯೆಯನ್ನು ತಿಳಿಗೊಳಿಸಿದರು.
Social Plugin